ಮೂರ್ನಾಡು, ಸೆ. 23 : ಮೂರ್ನಾಡು ಪದವಿ ಕಾಲೇಜಿನ ಸೀನಿಯರ್ ಡಿವಿಷನ್‍ನ ಎನ್‍ಸಿಸಿ ವಿದ್ಯಾರ್ಥಿಗಳಾದ ತೃತೀಯ ಬಿ.ಕಾಂನ ಎಂ.ಎಲ್. ಸುದೀಶ್ ಎನ್‍ಸಿಸಿಯ 'ಸಿ' ಸರ್ಟಿಫಿಕೇಟ್ ಪರೀಕ್ಷೆಯಲ್ಲಿ, ಪ್ರಥಮ ಬಿ.ಕಾಂನ ಕೆ.ಕೆ. ಶಾಂಭವಿ, ಪಿ.ಎ. ವೀಕ್ಷಿತ ಮತ್ತು ಕೆ.ಸಿ. ರಾಧಿಕ 'ಬಿ' ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಎನ್‍ಸಿಸಿ ಅಧಿಕಾರಿ ಪಳಂಗಂಡ ಕಾವೇರಪ್ಪ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಸಮಿತಿಯ ಸಂಚಾಲಕ ನಾಟೋಳಂಡ ನವೀನ್ ವಿದ್ಯಾರ್ಥಿಗಳೊಂದಿಗಿದ್ದಾರೆ.