ಮಡಿಕೇರಿ, ಸೆ. 23: ಬದುಕಿನಲ್ಲಿ ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವೆಂದು ಖ್ಯಾತ ಅಥ್ಲೆಟಿಕ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತ ವಿಘ್ನೇಶ್ ಭೂತನಕಾಡು ರಚಿಸಿರುವ ‘ಕೊಡವ ಕ್ರೀಡಾ ಕಲಿಗಳು’ ಹಾಗೂ ಬರಹಗಾರ್ತಿ ಕೂಪದಿರ ಸುಂದರಿ ಮಾಚಯ್ಯ ಬರೆದಿರುವ ‘ವಾಲ್ಮೀಕಿರಾಮಾಯಣ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪುಸ್ತಕಗಳಲ್ಲಿ ನೈಜ ಅನುಭವ ಅಡಕವಾಗಿರುತ್ತದೆ, ಜ್ಞಾನ ಎನ್ನುವದು ಸಂಪರ್ಕವಿದ್ದಂತೆ, ಅನುಭವ ಎನ್ನುವದು ದೊಡ್ಡ ಮಾರ್ಗದರ್ಶಕ ದಂತೆ, ಪುಸ್ತಕಗಳನ್ನು ಓದುವ ಸಂದರ್ಭ ನಾವೂ ಆ ಪುಸ್ತಕದಲ್ಲಿ ಅಡಕವಾಗಿ ದ್ದೇವೆ ಎಂದು ಓದನ್ನು ಅನುಭವಿಸಬೇಕು. ಯಾರಿಗೂ ಬೋಧನೆ ಮಾಡಲು ಹೋಗಬಾರದು. ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ ಪ್ರತಿಯೊಬ್ಬ ಮನುಷ್ಯನಲ್ಲಿ ಇರುತ್ತದೆ. ಇವುಗಳನ್ನು ಯಾರು ಹದವಾಗಿ ಬಳಸುತ್ತಾರೋ ಅವರೇ ಸಾಧುಗಳೆÉಂದು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕರೆ ನೀಡಿ 150 ವರ್ಷಗಳೇ ಕಳೆದಿದೆ. ಆದರೆ, ಜಪಾನ್ ದೇಶದ ಮಾದರಿಯಲ್ಲಿ ನಮ್ಮ ದೇಶ ಇನ್ನೂ ಕೂಡ ಗುರಿ ಮುಟ್ಟಿಲ್ಲವೆಂದು ವಿಷಾದಿಸಿದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನಾ ಕ್ರಮ ಬದಲಾಗ ಬೇಕೆಂದು ಅಭಿಪ್ರಾಯಪಟ್ಟ ಅರ್ಜುನ್ ದೇವಯ್ಯ, ಜೀವನದ ಪಾಠವನ್ನು ಬೋಧಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಒಬ್ಬ ವ್ಯಕ್ತಿಯ ಹೆಸರು ಶಾಶ್ವತವಾಗಿ ಇರಬೆÉೀಕಾದರೆ, ಅದು ಸಾಹಿತ್ಯ ರಚನೆಯಿಂದ ಮಾತ್ರ ಸಾಧ್ಯವೆಂದರು.

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೂಟದ ಮೂಲಕ ಅನೇಕ ಪುಸ್ತಕಗಳನ್ನು ಹೊರ ತಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಪತ್ರಕರ್ತ ಹಾಗೂ ಕೊಡವ ಕ್ರೀಡಾ ಕಲಿಗಳು ಪುಸ್ತಕದ ಲೇಖಕ ವಿಘ್ನೇಶ್ ಭೂತನಕಾಡು ಮಾತನಾಡಿ, ಸುಮಾರು 58 ಕ್ರೀಡಾಪಟುಗಳ ಸಾಧನೆಯನ್ನು ಮೊದಲ ಸಂಚಿಕೆಯಲ್ಲಿ ರಚಿಸಿದ್ದು, 2ನೇ ಸಂಚಿಕೆಯಲ್ಲಿ ಉಳಿದ ಕ್ರೀಡಾಪಟುಗಳನ್ನು ಪರಿಚಯಿಸು ವದಾಗಿ ತಿಳಿಸಿದರು.

ಕೊಡಗಿನ ಸಾಧಕ ಕ್ರೀಡಾಪಟುಗಳ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಿಳಿಸುವದರಿಂದ ಮುಂದಿನ ಸಂಚಿಕೆಯಲ್ಲಿ ಅದನ್ನು ಸೇರ್ಪಡೆಗೊಳಿಸಲು ಸುಲಭವಾಗ ಲಿದೆ ಎಂದರು.

ವೇದಿಕೆಯಲ್ಲಿ ಬರಹಗಾರ್ತಿÀ ಕೂಪದಿರ ಸುಂದರಿ ಮಾಚಯ್ಯ, ಸಾಹಿತಿ ನಾಗೇಶ್ ಕಾಲೂರು, ಪ್ರೆಸ್ ಕ್ಲಬ್ ನಿರ್ದೇಶಕರಾದ ಕಿಶೋರ್ ರೈ ಹಾಗೂ ಎಸ್.ಎಂ.ಮುಬಾರಕ್ ಉಪಸ್ಥಿತರಿದ್ದರು.