ಸೋಮವಾರಪೇಟೆ,ಸೆ.22: ಸಾಮಾಜಿಕ ಸಮನ್ವಯತೆ ಸಾಧಿಸುವದು ಪತ್ರಿಕೋದ್ಯಮದ ಅಂಗವಾಗಬೇಕು. ಪತ್ರಕರ್ತರು ನ್ಯಾಯಾಧೀಶರಂತಾಗುವ ಬದಲು ಸಮಾಜಕ್ಕೆ ಸಲಹೆಗಾರರಾಗಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಸ್ನಾತಕ್ಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹ್ಮದ್ ಹೇಳಿದರು.ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕೋದ್ಯಮ ಮತ್ತು ಸಮಾಜ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. 21ನೇ ಶತಮಾನದಲ್ಲಿ ಪತ್ರಿಕೋದ್ಯಮ ದಿಕ್ಕು ತಪ್ಪುತ್ತಿದೆಯೋ ಎಂಬ ಅನುಮಾನ ಮೂಡುವಷ್ಟರ ಮಟ್ಟಿಗೆ ಪತ್ರಿಕೋದ್ಯಮದ ಬೆಳವಣಿಗೆಗಳು ಕಂಡುಬರುತ್ತಿವೆ. ಕಾರ್ಪೋರೇಟರ್ ವಲಯ ಎಲ್ಲಾ ರಂಗಗಳಂತೆ ಪತ್ರಿಕೋದ್ಯಮವನ್ನೂ ಆವರಿಸಿಕೊಂಡಿದೆ. ಕಾಣದ ಕೈಗಳ ಹಿಡಿತದಲ್ಲಿ ಪತ್ರಕರ್ತರು ಇದ್ದಾರೆಯೇ ಎಂಬ ಅನುಮಾನ ಸಮಾಜದಲ್ಲಿದ್ದು,
ಆಶ್ರಯದಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕೋದ್ಯಮ ಮತ್ತು ಸಮಾಜ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. 21ನೇ ಶತಮಾನದಲ್ಲಿ ಪತ್ರಿಕೋದ್ಯಮ ದಿಕ್ಕು ತಪ್ಪುತ್ತಿದೆಯೋ ಎಂಬ ಅನುಮಾನ ಮೂಡುವಷ್ಟರ ಮಟ್ಟಿಗೆ ಪತ್ರಿಕೋದ್ಯಮದ ಬೆಳವಣಿಗೆಗಳು ಕಂಡುಬರುತ್ತಿವೆ. ಕಾರ್ಪೋರೇಟರ್ ವಲಯ ಎಲ್ಲಾ ರಂಗಗಳಂತೆ ಪತ್ರಿಕೋದ್ಯಮವನ್ನೂ ಆವರಿಸಿಕೊಂಡಿದೆ. ಕಾಣದ ಕೈಗಳ ಹಿಡಿತದಲ್ಲಿ ಪತ್ರಕರ್ತರು ಇದ್ದಾರೆಯೇ ಎಂಬ ಅನುಮಾನ ಸಮಾಜದಲ್ಲಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಕರ್ತರು ಒಗ್ಗಟ್ಟಾಗಬೇಕು. ವೃತ್ತಿ ಗೌರವ ಉಳಿಸಬೇಕು. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಯಾವೊಬ್ಬ ರಾಜಕಾರಣಿ, ಐಎಎಸ್, ಐಪಿಎಸ್ ಅಧಿಕಾರಿಗಳೂ ಸಹ ಪತ್ರಕರ್ತರ ಸಂಕಷ್ಟದ ಬಗ್ಗೆ ಚಿಂತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ವಹಿಸಿದ್ದರು. ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ. ಮುರಳೀಧರ್, ರಾಜ್ಯ ಸಮಿತಿ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂಗಪ್ಪ ಅವರುಗಳು ಉಪಸ್ಥಿತರಿದ್ದರು.