ಮಡಿಕೇರಿ, ಸೆ.22 : ಸಮರ್ಪಕ ಗೊಬ್ಬರದ ಬಳಕೆ ನಡೆಯದಿರುವ ದರಿಂದ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಯಾವದೇ ಪ್ರದೇಶದಲ್ಲಿನ ಕೃಷಿಗೆ ರಸಗೊಬ್ಬರವನ್ನು ಬಳಸುವದಕ್ಕೂ ಮುನ್ನ ಮಣ್ಣಿನ ಪರೀಕ್ಷೆ ನಡೆಸುವದು ಅತ್ಯವಶ್ಯಕವೆಂದು ಎಂಸಿಎಫ್ ಕೊಡಗು ಜಿಲ್ಲಾ ವ್ಯವಸ್ಥಾಪಕ ಮೃತ್ಯುಂಜಯ ತಿಳಿಸಿದ್ದಾರೆ.

ಭಾಗಮಂಡಲ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಶನಿವಾರ ಆಯೋಜಿತವಾಗಿದ್ದ ರೈತರ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಡಿಕೇರಿ, ಸೆ.22 : ಸಮರ್ಪಕ ಗೊಬ್ಬರದ ಬಳಕೆ ನಡೆಯದಿರುವ ದರಿಂದ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಯಾವದೇ ಪ್ರದೇಶದಲ್ಲಿನ ಕೃಷಿಗೆ ರಸಗೊಬ್ಬರವನ್ನು ಬಳಸುವದಕ್ಕೂ ಮುನ್ನ ಮಣ್ಣಿನ ಪರೀಕ್ಷೆ ನಡೆಸುವದು ಅತ್ಯವಶ್ಯಕವೆಂದು ಎಂಸಿಎಫ್ ಕೊಡಗು ಜಿಲ್ಲಾ ವ್ಯವಸ್ಥಾಪಕ ಮೃತ್ಯುಂಜಯ ತಿಳಿಸಿದ್ದಾರೆ.

ಭಾಗಮಂಡಲ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಶನಿವಾರ ಆಯೋಜಿತವಾಗಿದ್ದ ರೈತರ ಸಭೆಯಲ್ಲಿ ಮಾಹಿತಿ ನೀಡಿ ಅವರು ಕೃಷಿಕರು ತಮ್ಮ ತೋಟದ ಜಾಗದ ಮಣ್ಣನ್ನು ತೆಗೆದು ಪರೀಕ್ಷೆಗೆ ನೀಡಬೇಕು ಮತ್ತು ಈ ಸಂದರ್ಭ ಪರೀಕ್ಷೆಗೆ ಕೊಡುವ ಮಣ್ಣಿನಲ್ಲಿ ಯಾವದೇ ರೀತಿಯ ಗೊಬ್ಬರ ಸೇರ್ಪಡೆಗೊಳ್ಳದಂತೆ ಎಚ್ಚರಿಕೆ ವಹಿಸುವದು ಅತ್ಯವಶ್ಯ. ಮಣ್ಣನ್ನು ಪರೀಕ್ಷೆಗೆ ನೀಡಿದ 20 ದಿನದಲ್ಲಿ ರೈತರಿಗೆ ಸಂಸ್ಥೆಯಿಂದ ಹೆಲ್ತ್ ಕಾರ್ಡ್ ನೀಡಲಾಗುವದೆಂದು ಮಾಹಿತಿ ನೀಡಿದರು.

ಜಿಲ್ಲೆಯ ಬೆಳೆಗಾರರು ತಮ್ಮ ತೋಟದ ಕರಿಮೆಣಸು, ಕಾಫಿ ಕೃಷಿ ಸೇರಿದಂತೆ ಭತ್ತದ ಕೃಷಿ ಚಟುವಟಿಕೆಗೆ ಅನುಗುಣವಾಗಿ ಮಣ್ಣಿನ ಪರೀಕ್ಷೆ ನಡೆಸುವ ಮೂಲಕ, ಆ ಪ್ರದೇಶಕ್ಕೆ ಅಗತ್ಯವಾಗಿ ನೀಡಬೇಕಾದ ಪೋಷಕಾಂಶದ ಮಾಹಿತಿಯನ್ನು ಅರಿತು, ಸಮರ್ಪಕ ರೀತಿಯಲ್ಲಿ ಗೊಬ್ಬರವನ್ನು ಕೃಷಿಗೆ ಒದಗಿಸಲು ಮುಂದಾಗಬೇಕು. ಇದರಿಂದ ಉತ್ತಮ ಫಸಲನ್ನು ಪಡೆಯಲು ಸಾಧ್ಯವೆಂದು ತಿಳಿಸಿದರು.

ವಿಎಸ್‍ಎಸ್‍ಎನ್ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ಕಾರ್ಯಾಗಾರವನ್ನು ನಡೆಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.ಸಭೆÉಯಲ್ಲಿ ವಿಎಸ್‍ಎಸ್‍ಎನ್‍ನ ನಿರ್ದೇಶಕ, ಸಿಬ್ಬಂದಿ ವರ್ಗ, ರೈತರು ಉಪಸ್ಥಿತರಿದ್ದರು.