ಮಡಿಕೇರಿ, ಸೆ. 22: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ಮನೆ ನಿರ್ಮಿಸಿಕೊಳ್ಳಲು ನಿವೇಶನದ ಜತೆಗೆ ರೂ. 7 ಲಕ್ಷವನ್ನು ಒಂದೇ ಬಾರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.ಕೆ.ಆರ್. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರಕಾರದಿಂದ ರೂ. 6 ಲಕ್ಷ, ಕೇಂದ್ರೀಯ ವಿಪತ್ತು ನಿಧಿಯ ಪರಿಹಾರ ಸೇರಿದಂತೆ ಒಟ್ಟು 7 ಲಕ್ಷ ನೀಡಲಾಗುವದು. ಹಾನಿಗೊಂಡ ಮನೆಗೆ ರೂ. 1 ಲಕ್ಷ, ಅಗತ್ಯ ವಸ್ತುಗಳನ್ನು ಕೊಳ್ಳಲು ರೂ. 50 ಸಾವಿರ, ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ತಿಂಗಳಿಗೆ ರೂ. 10 ಸಾವಿರ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.