ಮಡಿಕೇರಿ, ಸೆ. 22: ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ಮಳೆಯೊಂದಿಗೆ ಭೂಕುಸಿತ ಸಂಭವಿಸಿ ಹಾನಿ ಉಂಟಾಗಿರುವ ದಿಸೆಯಲ್ಲಿ ಸರಕಾರದಿಂದ ಜಿಲ್ಲೆಗೆ ಬಿಡುಗಡೆಗೊಂಡಿರುವ ರೂ. 115 ಕೋಟಿ ಹಣಕ್ಕೆ ಲೆಕ್ಕ ನೀಡುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಜಿಲ್ಲಾಧಿಕಾರಿಗಳನ್ನು ಆಗ್ರಹಪಡಿಸಿದ್ದಾರೆ. ನಿನ್ನೆ ಹಾಲೇರಿಯಿಂದ ಸೋಮವಾರಪೇಟೆ ರಸ್ತೆ ಸಂಚಾರಕ್ಕೆ ಚಾಲನೆ ನೀಡಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಾನಿ ಗೊಂಡಿರುವ ರಸ್ತೆಗಳ ಕೆಲಸ ಸಮರೋಪಾದಿಯಲ್ಲಿ ನಡೆದಿದ್ದರೂ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಕಾಮಗಾರಿಗೆ ಇನ್ನು ಕೂಡ ಹಣ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೂಡ ದನಿಗೂಡಿಸಿ, ರಸ್ತೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ಹಣ ಒದಗಿಸದಿದ್ದರೆ, ಕೆಲಸ ಮಾಡುವದಾದರೂ ಹೇಗೆಂದು ಪ್ರಶ್ನಿಸಿದರು. ಮಾತು ಮುಂದುವರಿಸಿದ ಶಾಸಕರುಗಳಿಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ಜಿಲ್ಲಾಧಿಕಾರಿಯನ್ನು ಅವಕಾಶವಾದಿಗಳು ಕಾವೇರಿ ಮಾತೆಗೆ ಹೋಲಿಸುತ್ತಿರುವದು ಸರಿಯೇ? ಎಂದು ತೀಕ್ಷ್ಣ ಪ್ರತಿಕ್ರಿಯೆಯೊಂದಿಗೆ, ಜಿಲ್ಲೆಯ ಶಾಸಕರುಗಳ ಸಹಿತ ಜನಪ್ರತಿನಿಧಿಗಳು, ಎಲ್ಲಾ ಇಲಾಖಾ ಅಧಿಕಾರಿಗಳು ಕೊಡಗನ್ನು ಮರು ಸುಧಾರಿಸಲು ಶ್ರಮಿಸುತ್ತಿರುವದಾಗಿ ನೆನಪಿಸಿದರು.

ಪ್ರತಿಭಟನೆ ಎಚ್ಚರಿಕೆ: ಒಂದು ವೇಳೆ ಜಿಲ್ಲಾಧಿಕಾರಿಗಳು ಕಾಮಗಾರಿಯ

ಈ ವೇಳೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೂಡ ದನಿಗೂಡಿಸಿ, ರಸ್ತೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ಹಣ ಒದಗಿಸದಿದ್ದರೆ, ಕೆಲಸ ಮಾಡುವದಾದರೂ ಹೇಗೆಂದು ಪ್ರಶ್ನಿಸಿದರು. ಮಾತು ಮುಂದುವರಿಸಿದ ಶಾಸಕರುಗಳಿಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ಜಿಲ್ಲಾಧಿಕಾರಿಯನ್ನು ಅವಕಾಶವಾದಿಗಳು ಕಾವೇರಿ ಮಾತೆಗೆ ಹೋಲಿಸುತ್ತಿರುವದು ಸರಿಯೇ? ಎಂದು ತೀಕ್ಷ್ಣ ಪ್ರತಿಕ್ರಿಯೆಯೊಂದಿಗೆ, ಜಿಲ್ಲೆಯ ಶಾಸಕರುಗಳ ಸಹಿತ ಜನಪ್ರತಿನಿಧಿಗಳು, ಎಲ್ಲಾ ಇಲಾಖಾ ಅಧಿಕಾರಿಗಳು ಕೊಡಗನ್ನು ಮರು ಸುಧಾರಿಸಲು ಶ್ರಮಿಸುತ್ತಿರುವದಾಗಿ ನೆನಪಿಸಿದರು.

ಪ್ರತಿಭಟನೆ ಎಚ್ಚರಿಕೆ: ಒಂದು ವೇಳೆ ಜಿಲ್ಲಾಧಿಕಾರಿಗಳು ಕಾಮಗಾರಿಯ ಜಾನುವಾರುಗಳ ಸಾವು ಸೇರಿದಂತೆ ಮನೆ ಇತ್ಯಾದಿ ಕಳೆದುಕೊಂಡಿರುವ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಜಿಲ್ಲಾಡಳಿತ ಕಲ್ಪಿಸಿರುವದಾಗಿ ವಿವರಿಸಿದರು. ಮಾತ್ರವಲ್ಲದೆ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳ ರಿಪೇರಿ ಇತ್ಯಾದಿ ತುರ್ತು ಕೆಲಸಕ್ಕೆ ಈ ಅನುದಾನ ಬಳಕೆಯಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರೂ. 115 ಕೋಟಿ ಬಂದಿಲ್ಲ : ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು ರೂ. 115 ಕೋಟಿ ಬಿಡುಗಡೆ ಗೊಳಿಸುವದಾಗಿ ಆದೇಶಿಸಿದ್ದ ರಾದರೂ, ತಾಂತ್ರಿಕ ಕಾರಣದಿಂದ ಆ ಬಾಬ್ತು ರೂ. 85 ಕೋಟಿ ಸರಕಾರದಿಂದ

(ಮೊದಲ ಪುಟದಿಂದ) ಕೊಡಗು ಜಿಲ್ಲಾಡಳಿತಕ್ಕೆ ಲಭ್ಯವಾಗಿಲ್ಲವೆಂದು ಸ್ಪಷ್ಟಪಡಿಸಿದ ಶ್ರೀವಿದ್ಯಾ, ಈ ಬಗ್ಗೆ ಶಾಸಕರುಗಳಿಗೂ ಅರಿವಿದೆ ಎಂದು ಮಾಹಿತಿ ನೀಡಿದರು.

ಇಲಾಖೆಗಳಿಗೆ ಹಣ : ರಸ್ತೆ ಇತ್ಯಾದಿ ಕಾಮಗಾರಿಯ ಹಣ ನೇರವಾಗಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಿತ ಸಂಬಂಧಿಸಿದ ಇಲಾಖೆಗಳಿಗೆ ಸರಕಾರ ಪಾವತಿಸಲಿದ್ದು, ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆಯಾಗುವದಿಲ್ಲವೆಂದು ಶ್ರೀವಿದ್ಯಾ ಸಮಜಾಯಿಷಿಕೆ ನೀಡಿದರು. ತಾವು ಇರುವ ಹಣದಲ್ಲಿ ಲೋಕೋಪಯೋಗಿ ಇಲಾಖೆಗೆ ರೂ. 50 ಲಕ್ಷ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ರೂ. 50 ಲಕ್ಷ, ನಗರಾಭಿವೃದ್ಧಿ ಬಾಬ್ತು ರೂ. 50 ಲಕ್ಷದಂತೆ ಅತ್ಯವಶ್ಯಕವಿರುವೆಡೆಗಳಿಗೆ ನೆರವು ಒದಗಿಸಿದ್ದು, ಇದುವರೆಗೆ ಹಿಂದಿನ ಮೊತ್ತವೆಲ್ಲವೂ ಸೇರಿ ಕೇವಲ ರೂ. 30 ಕೋಟಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಕ್ಷಣಾ ಇಲಾಖೆ ಹಣವೂ ಬಂದಿಲ್ಲ: ಜಿಲ್ಲಾಧಿಕಾರಿ ಕಚೇರಿ ಲೆಕ್ಕಪತ್ರ ವಿಭಾಗದ ಮೂಲಗಳ ಪ್ರಕಾರ ಕೇಂದ್ರ ರಕ್ಷಣಾ ಖಾತೆ ಸಚಿವರು ಘೋಷಿಸಿದ್ದ ರೂ. 8 ಕೋಟಿ ಹಣವೂ ಕೂಡ ಇದುವರೆಗೆ ಬಿಡುಗಡೆಗೊಂಡಿಲ್ಲವೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೇಂದ್ರ ಪ್ರಾಕೃತಿಕ ವಿಕೋಪ ನಿಧಿ ರೂ 20 ಕೋಟಿಯೊಂದಿಗೆ ಹಳೆಯ ಬಾಕಿ ಜಿಲ್ಲಾಧಿಕಾರಿ ಖಾತೆಯ ರೂ. 10 ಕೋಟಿ ನಿಧಿಯಿಂದಷ್ಟೇ ಇಲ್ಲಿ ಎಲ್ಲವೂ ಸುಧಾರಿಸುವಂತಾಗಿದೆ.