ಸೋಮವಾರಪೇಟೆ, ಸೆ. 22: ಮಾತೃಪೂರ್ಣ ಯೋಜನೆಯ ಪ್ರಯೋಜನವನ್ನು ಪಡೆಯಲಿರುವ ಪ್ರತಿಯೋರ್ವ ಗರ್ಭಿಣಿ ಮಹಿಳೆಯು ಅಂಗನವಾಡಿಯಲ್ಲಿ ಹೆಸರು ದಾಖಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೀಲಾ ಹೇಳಿದರು.
ಇಲ್ಲಿಗೆ ಸಮೀಪದ ಮಸಗೋಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ,ಮಾತೃವಂದನÀ ಮತ್ತು ಪೌಷ್ಟಿಕಾಂಶ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗರ್ಭಿಣಿ ಮಹಿಳೆ ಪ್ರತಿ ದಿನ ಮಧ್ಯಾಹ್ನ ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸಬೇಕು. ಪ್ರತಿ ಫಲಾನುಭವಿಗೆ ಸರಕಾರ 21ರೂ.ಗಳನ್ನು ಪ್ರತಿ ನಿತ್ಯ ಖರ್ಚು ಮಾಡುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಇದೇ ಸಂಧರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತೃ ವಂದನಾ ಯೋಜನೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬೋಪಯ್ಯ, ಶಿಕ್ಷಕರಾದ ಉದಯ್, ಆರೋಗ್ಯ ಇಲಾಖೆಯ ಪಾರ್ವತಿ, ಜಯಂತಿ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭ ಆಶಾ ಕಾರ್ಯಕರ್ತೆಯರು ಪೌಷ್ಟಿಕಾಂಶ ಆಹಾರ ತಯಾರಿಸುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.