ಮಡಿಕೇರಿ, ಸೆ. 22: ಐಬಿಪಿಎಸ್ ಅವರ ವತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ 7275 ಗುಮಾಸ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು hಣಣಠಿ://ibಠಿs.iಟಿ ಮುಖಾಂತರ ಆನ್‍ಲೈನಲ್ಲಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ. ನೇಮಕಾತಿಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನವನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯು ಆನ್‍ಲೈನ್ ಪರೀಕ್ಷೆಯಾಗಿರುತ್ತದೆ. ಅಭ್ಯರ್ಥಿಯು ಯಾವದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಸೆಪ್ಟೆಂಬರ್ 1, 2018 ಕ್ಕೆ ಕನಿಷ್ಟ 20 ವರ್ಷಗಳು ಆಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 28 ವರ್ಷಗಳು. ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗಳು ಹಾಗೂ ಓ.ಬಿ.ಸಿ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷಗಳು ವಯೋಮಿತಿ. ಪೂರ್ವಭಾವಿ ಪರೀಕ್ಷೆಯು ಡಿಸೆಂಬರ್ 8, ಡಿ. 9, ಡಿ. 15 ಮತ್ತು ಡಿ. 16 ರಂದು ಬೆಂಗಳೂರು, ಬೆಳಗಾವಿ, ಬೀದರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಕೇಂದ್ರಗಳಲ್ಲಿ ನಡೆಯಲಿದೆ. 2019ರ ಜನವರಿ, 20 ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಹತ್ತಿರದ ಗ್ರಾ.ಪಂ. ಅಧಿಕಾರಿಯನ್ನು ಸಂಪರ್ಕಿಸಬಹುದು.