ಮಡಿಕೇರಿ, ಸೆ. 19: ಪೊನ್ನಂಪೇಟೆಯ ರಂಗಭೂಮಿ ಪ್ರತಿಷ್ಠಾನ ಮತ್ತು ಅರಣ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ತಾ. 21 ಬೆಳಿಗ್ಗೆ 10.30 ಗಂಟೆಗೆ ಅರಣ್ಯ ಮಹಾವಿದ್ಯಾಲಯದ ಸಬಾಂಗಣದಲ್ಲಿ ಹರದಾಸ ಅಪ್ಪಚ್ಚಕವಿಯ 150ನೇ ಜನ್ಮೋತ್ಸವ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರು ಮಿತ್ರ ಪತ್ರಿಕೆಯ ಸಂಪಾದಕ ಕೆ.ಬಿ. ಗಣಪತಿ ಭಾಗವಹಿಸಲಿದ್ದಾರೆ. ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೊ.ಇಟ್ಟಿರ ಕೆ. ಬಿದ್ದಪ್ಪ, ಅಡ್ಡಂಡ ಕಾರ್ಯಪ್ಪ ಬರೆದಿರುವ ಅಪ್ಪಚ್ಚ ಕವಿಯ ಬದುಕು ಬರಹದ ಕಿರು ಪುಸ್ತಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮತ್ತು ಅಪ್ಪಚ್ಚ ಕವಿ ವಿದ್ಯಾಲಯದ ಅಧ್ಯಕ್ಷೆ ಮಲಚೀರ ಆಶಾ ಅಪ್ಪಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಂಗಭೂಮಿ ಪ್ರತಿಷ್ಠಾನದ ಸದಸ್ಯರಿಂದ ‘ಅಮರ ಕಾವ್ಯ’ ಎಂಬ ಕವಿಕಾವ್ಯ ನಿರೂಪಣೆ ಮದ್ರೀರ ಸಂಜು ಸಂಗೀತ ನಿರ್ದೇಶನದಲ್ಲಿ ಮೂಡಿಬರಲಿದೆ.