ಭಾಗಮಂಡಲ, ಸೆ. 19: ಭಾಗಮಂಡಲ ಕಡೆಯಿಂದ ಮಡಿಕೇರಿಗೆ ಹೋಗುತ್ತಿದ್ದ ಕೊಯಮತ್ತೂರಿನ ನವಿನ್ ಕುಟ್ಟು ಚಲಾಯಿಸುತ್ತಿದ್ದ ಕಾರನ್ನು (ಖಿಓ 37-ಃಕಿ 5758) ಎದುರುಗಡೆ ನಾಯಿ ಅಡ್ಡ ಬಂದಿದ್ದರಿಂದ ಬದಿಗೆ ಸರಿದಾಗ ಎದುರುಗಡೆಯಿಂದ ಬಂದ ಬೈಕ್ ಚೇರಂಬಾಣೆ ಪರಂಬು ನಿವಾಸಿ ಯೋಗೇಂದ್ರ ಅವರ ಬೈಕ್‍ಗೆ (ಏಂ12-ಕಿ6153) ಡಿಕ್ಕಿಯಾಗಿದ್ದು, ಸವಾರ ಯೋಗೇಂದ್ರನ ಬಲಕಾಲು ಮುರಿದಿದೆ. ಸವಾರನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.