ವೀರಾಜಪೇಟೆ, ಸೆ. 19: ತಮಿಳ್ನಾಡಿನ ಕೊಯಮುತ್ತೂರಿನಲ್ಲಿ ನಡೆದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಇಲ್ಲಿನ ಸಂತ ಅನ್ನಮ್ಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಟಿ.ಯು. ಆಕಾಶ್ ಕತ್ತಾ ಹಾಗೂ ಕುಮಿತೆ ವಿಭಾಗದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾನೆ.

ವಿದ್ಯಾರ್ಥಿ ಆಕಾಶ್ ವೀರಾಜಪೇಟೆಯ ಉಮೇಶ್, ಲೇಖಾ ದಂಪತಿಯ ಪುತ್ರನಾಗಿದ್ದು ಸೆನ್‍ಸಾಯ್ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದರು.