ನಾಪೆÇೀಕ್ಲು, ಸೆ. 19: ನಾಪೆÇೀಕ್ಲು ಕೊಡವ ಸಮಾಜದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ವಿತರಿಸಿ, ಉಳಿದ 10 ಚೀಲ ಅಕ್ಕಿ, ಗೋಧಿ, ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನು ರೆಸ್ಕ್ಯೂ ತಂಡದ ಕೇಲೇಟಿರ ದೀಪು ದೇವಯ್ಯ, ಬಾಳೆಯಡ ಪ್ರತೀಶ್, ಕೇಟೋಳಿರ ರೆಮ್ಮಿ, ಕೊಂಡಿರ ಗಣಪತಿ, ಬೊಟ್ಟೋಳಂಡ ಚೇತನ್ ಪೆÇನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆಗೆ ನೀಡಿದರು.
ಈ ತಂಡ ಕಳೆದ ಒಂದು ತಿಂಗಳಿನಿಂದ ಚೇರಂಬಾಣೆ, ಕೊಟ್ಟಮುಡಿ, ಸೇರಿದಂತೆ ಎಲ್ಲಾ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ತಾವು ದಾನಿಗಳಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ ತಂಡದ ವತಿಯಿಂದ ಗುಡ್ಡೆಹೊಸೂರಿನ ಜ್ಯೋತಿ ಎಂಬವರ ತಂದೆಗೆ ಗಾಲಿ ಕುರ್ಚಿ ಹಾಗೂ 15 ಕುಟುಂಬಗಳಿಗೆ ತಲಾ ರೂ. 15 ಸಾವಿರ ನೀಡಿದೆ. ತಂಡದಲ್ಲಿ ಪಾಡೆಯಂಡ ಕಟ್ಟಿ, ಕೇಲೇಟಿರ ಡಾ. ಬೋಪಣ್ಣ, ಚುಬ್ರಿ, ಕಾಳು ಮತ್ತಿತರರು ಶ್ರಮಿಸಿದ್ದಾರೆ. ಇನ್ನು ಇವರಲ್ಲಿ ಸಂಗ್ರಹಿಸಿದ 90 ಸಾವಿರ ರೂ.ಗಳು ಉಳಿದಿದ್ದು, ಹೆಚ್ಚು ಸಂಕಷ್ಟದಲ್ಲಿರುವವರು ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದಲ್ಲಿ ಸಹಕರಿಸಲಾಗುವದು ಎಂದು ತಂಡದ ಕೇಲೇಟಿರ ದೀಪು ದೇವಯ್ಯ ತಿಳಿಸಿದ್ದಾರೆ. ಮೊ. 9686869213.