ಮಡಿಕೇರಿ, ಸೆ. 18: ಕೊಡಗಿನ ನಿಯೋಗವು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಖಾತೆ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಇಂದು ಭೇಟಿ ಮಾಡಿ ಮನವಿ ಯೊಂದನ್ನು ಸಲ್ಲಿಸಿತು. ಜಿಲ್ಲೆಯಲ್ಲಿ ಕಳೆದ ತಿಂಗಳು ಅತಿವೃಷ್ಟಿ, ಭೂ ಕುಸಿತ ಹಾಗೂ ಪ್ರವಾಹದಿಂದ ಸಂಭವಿಸಿದ ಭಾರೀ ಪ್ರಮಾಣದ ಹಾನಿ ಕುರಿತು ಕೇಂದ್ರ ಗೃಹ ಸಚಿವರÀ ಗಮನಕ್ಕೆ ತರ ಲಾಯಿತು. ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು (ಮೊದಲ ಪುಟದಿಂದ) ಭೇಟಿಯಾಗಿ ಮಳೆಯಿಂದಾದ ನಷ್ಟವನ್ನು ಸರಿದೂಗಿಸಲು ಸಹಾಯವಾಗು ವಂತೆ ರೂ.5000 ಸಾವಿರ ಕೋಟಿ ಯನ್ನು ಜಿಲ್ಲೆಗೆ ವಿಶೇಷ ಅನುದಾನದ ರೂಪದಲ್ಲಿ ನೀಡುವಂತೆ ಮನವಿ ಮಾಡಲಾಯಿತು. ಈ ನಿಯೋಗದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರು ಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ತೆರಳಿದ್ದರು. ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಜನಾಥ್ ಸಿಂಗ್ ಅವರು ಕೇಂದ್ರ ಸಮೀಕ್ಷಾ ತಂಡದಿಂದ ಇನ್ನೂ ವರದಿ ಬರಬೇಕಿದೆ. ವರದಿ ತಲುಪಿದೊಡನೆ ಸೂಕ್ತ ನಿರ್ಧಾರ ಕೈಗೊಳ್ಳುವದಾಗಿ ಅವರು ನಿಯೋಗಕ್ಕೆ ಭರವಸೆಯಿತ್ತರು.

ಲಿಖಿತ ಮನವಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಸರಾಸರಿ 69 ಇಂಚುಗಳಾಗಿದ್ದರೆ ಪ್ರಸಕ್ತ ವರ್ಷ ಸರಾಸರಿ ಇದುವರೆಗೆ 148 ಇಂಚು ಮಳೆಯಾಗಿದೆ. ಜಿಲ್ಲೆಯಲ್ಲಿ 20 ಮಂದಿ ಸಾವಿಗೀಡಾಗಿದ್ದಾರೆ, 800 ಮನೆಗಳು ನೆಲಕಚ್ಚಿವೆ, 2275 ಮನೆಗಳು ಭಾಗಶ: ಹಾನಿಯಾಗಿವೆ, 1,24,117 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ನಷ್ಟಗೊಂಡಿವೆ, 95 ಜಾನುವಾರಗಳು ಸತ್ತಿವೆ ಎಂದು ವಿವರಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆಗಳು ಸೇತುವೆಗಳು ಹಾಳಾಗಿವೆ, ವಿದ್ಯುತ್ ಉಪಕರಣಗಳು ನಾಶಗೊಂಡಿವೆ, ಕಾಫಿ ತೋಟಗಳು, ಭತ್ತದ ಗದ್ದೆÉಗಳು ಹಾನಿಗೀಡಾಗಿವೆ ಎಂದು ತಿಳಿಸಿದ್ದು ವಿವರ ಮಾಹಿತಿ ಸಹಿತವಾಗಿ ನೀಡಲಾಯಿತು. ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಮಂದಿ ವಿವಿಧ ರೀತಿಯಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವಿವರಿಸಲಾಯಿತು.