ಸೋಮವಾರಪೇಟೆ,ಸೆ.18: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಸೋಮವಾರಪೇಟೆ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು, ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿಗಳು ಹೊಸ ಭಾಷ್ಯ ಬರೆದಿದ್ದು, ಮಹಾತ್ಮಾ ಗಾಂಧಿ ಅವರ ಹುಟ್ಟು ಹಬ್ಬದ ದಿನದಂದು ಸ್ವಚ್ಛಭಾರತ್ ಅಭಿಯಾನ ಪ್ರಾರಂಭಿಸಿದ್ದಾರೆ. ನಮ್ಮ ಮನೆಗಳೊಂದಿಗೆ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು. ನಂತರ ಕಾರ್ಯಕರ್ತರು ಆಟೋ ನಿಲ್ದಾಣ ಬಳಿ, ತಾಲೂಕು ಕಚೇರಿ ಆವರಣ, ಕಚೇರಿಯ ಒಳಭಾಗದಲ್ಲಿ ಶ್ರಮದಾನ ನಡೆಸುವ ಮೂಲಕ ಸ್ವಚ್ಛಗೊಳಿಸಿದರು.

ತಾ.ಪಂ. ಸದಸ್ಯೆ ತಂಗಮ್ಮ, ಬಿಜೆಪಿ ಪ್ರಮುಖರಾದ ಮನು ರೈ, ಕಿಬ್ಬೆಟ್ಟ ಮಧು, ಸುನಿಲ್, ಸೋಮೇಶ್, ನಳಿನಿ ಗಣೇಶ್, ವಿಜಯಲಕ್ಷ್ಮೀ ಸುರೇಶ್, ಗಿರಿಧರ್, ಶರತ್‍ಚಂದ್ರ, ಚೇತನ್, ಮಹೇಶ್, ಕೊಮಾರಿ ಸತೀಶ್, ಎನ್.ಎಸ್. ಮೂರ್ತಿ, ಪಿ.ಕೆ. ಚಂದ್ರು, ದಾಕ್ಷಾಯಿಣಿ, ದಿವ್ಯ ಸೇರಿದಂತೆ ಇತರರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.