ಗೋಣಿಕೊಪ್ಪಲು, ಸೆ. 18: ಇಲ್ಲಿನ ಕಾವೇರಿ ಪದವಿ ಕಾಲೇಜಿನ ರಾಜ್ಯಶಾಶ್ತ್ರ ವಿಭಾಗದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಸಮಾಜ ಸೇವಕಿ ಬಬ್ಬೀರ ಸರಸ್ವತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸಮಾಜ ಸುಧಾರಣೆಯಲ್ಲಿ ತಮ್ಮ ಪಾತ್ರ ನಿರ್ವಹಿಸಬೇಕು. ಮಾನವನ ಹಕ್ಕನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ತಾವೂ ಬದುಕಿ ಇನ್ನೊಬ್ಬರನ್ನು ಬದುಕಲು ಬಿಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು ಎಂದರು. ವಿದ್ಯಾಥಿಗಳಿಗೆ ಅಗತ್ಯ ಕಾನೂನಿನ ಬಗ್ಗೆ ಮಾರ್ಗದರ್ಶನ ನೀಡಿದರು.

ಉಪಪ್ರಾಂಶುಪಾಲೆ ಪ್ರೊ. ಎಂ.ಡಿ. ಅಕ್ಕಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಕೆ.ಬಿ ಸೀತಮ್ಮ ಹಾಗೂ ಸಿ.ಟಿ. ಕಾವ್ಯ ಉಪಸ್ಥಿತರಿದ್ದರು. ಶಹೀನ್ ಮತ್ತು ಅಶ್ರಿತ ಕಾರ್ಯಕ್ರಮ ನಿರೂಪಿಸಿದರು.