ಮಡಿಕೇರಿ, ಸೆ. 17: ಒಂದು ತಿಂಗಳ ಹಿಂದೆ ಮಡಿಕೇರಿ-ಸಕಲೇಶಪುರ ಹೆದ್ದಾರಿಯು; ಮಕ್ಕಂದೂರು ಸಿಂಕೋನ ತೋಟ ಬಳಿ ಭಾರೀ ಭೂಕುಸಿತದಿಂದ ಸಂಪರ್ಕ ಸ್ಥಗಿತಗೊಂಡಿರುವ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿದರು.

ಇಂದು ರಸ್ತೆಯ ಪರ್ಯಾಯ ಮಾರ್ಗ ಕೆಲಸ ಪರಿಶೀಲಿಸಿದ ಅವರು, ಕುಸಿದಿರುವ ಪ್ರದೇಶದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೋರಿಕೆ ಮೇರೆಗೆ ತೋಟ ಮಾಲೀಕ ಅಶೋಕ್‍ಕುಮಾರ್ ಶೆಟ್ಟಿ ಎಂಬವರು ಎಕರೆಯಷ್ಟು ಕಾಫಿ ತೋಟವನ್ನೇ ಬಿಟ್ಟುಕೊಟ್ಟಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ರಸ್ತೆ ಸಂಪರ್ಕ ಕಾಮಗಾರಿ ಭರದಿಂದ ಸಾಗಿದ್ದು, ಆದಷ್ಟು ಬೇಗನೆ ಪೂರೈಸಿದರೆ ಕಳೆದ ಒಂದು ತಿಂಗಳಿನಿಂದ ಬಳಸು ದಾರಿಯಲ್ಲಿ ಸಂಚಾರದೊಂದಿಗೆ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ತಪ್ಪಲಿದೆ ಎಂದು ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟರು.