ಕುಶಾಲನಗರ, ಸೆ. 17: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಗಂಧದ ಮರ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವದು ಕಂಡುಬಂದಿದೆ. ಸ್ಥಳೀಯ ಪ.ಪಂ. ಕಚೇರಿ ಆವರಣದಲ್ಲಿ ಬೆಳೆದು ನಿಂತಿದ್ದ ಗಂಧದ ಮರವೊಂದನ್ನು ಕಳೆದ ರಾತ್ರಿ ಯಾರೋ ಕಳ್ಳರು ತುಂಡರಿಸಿರುವದು ಗೋಚರಿಸಿದೆ.

ಕಚೇರಿಯಲ್ಲಿ ರಾತ್ರಿ ಪಾಳಿ ಕಾವಲುಗಾರನಿದ್ದರೂ ಕಳ್ಳರು ರಾಜಾರೋಷವಾಗಿ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಪ್ರವಾಸಿ ಮಂದಿರ ಬಳಿ ಹಾಗೂ ಪೊಲೀಸ್ ಠಾಣೆಯ ಹತ್ತಿರ ಕೂಡ ಮರಗಳನ್ನು ತುಂಡರಿಸಿರುವ ಘಟನೆ ನಡೆದಿದೆ.

ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಿ ಕಳ್ಳರ ಪತ್ತೆಗೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಉದ್ಯಮಿ ವಿ.ಪಿ. ನಾಗೇಶ್ ಪತ್ರಿಕೆ ಮೂಲಕ ಕೋರಿದ್ದಾರೆ.