ನಾಪೆÇೀಕ್ಲು, ಸೆ. 17: ಕೊಡಗಿನಲ್ಲಿ ಜಲಪ್ರಳಯದ ಕಾರಣ ಉಂಟಾದ ಕಾಫಿ, ಕಾಳುಮೆಣಸು ಬೆಳೆಗಳಿಗೆ ಸರಕಾರದಿಂದ ದೊರೆಯುವ ಪರಿಹಾರದ ಹಣವನ್ನು ಜಲಪ್ರಳಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪುನರ್ವಸತಿ ನೀಡುವ ಸಲುವಾಗಿ ನೀಡುವದಾಗಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮತ್ತು ಸಣ್ಣ ಬೆಳೆಗಾರ ಅಪ್ಪನೆರವಂಡ ಕಿರಣ್ ಕಾರ್ಯಪ್ಪ ತಿಳಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಅವರು, ಫಸಲು ಕಳೆದುಕೊಂಡ ಬೆಳೆಗಾರರಿಗೆ ಮುಂದಿನ ವರ್ಷ ಫಸಲು ದೊರೆಯುತ್ತದೆ. ಆದರೆ ಜಲಪ್ರಳಯದಿಂದ ಮನೆ, ತೋಟ ಕಳೆದುಕೊಂಡವರ ಸಂಕಷ್ಟ ಊಹಿಸಲೂ ಸಾಧ್ಯವಿಲ್ಲ. ಅವರ ಜಾಗದಲ್ಲಿ ಮತ್ತೆ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ಈ ರೀತಿಯಾಗಿ ಅವರಿಗೆ ನೆರವಾಗಬಹುದು ಎಂದು ಅವರು ಮನವಿ ಮಾಡಿದರು.