ವೀರಾಜಪೇಟೆ, ಸೆ. 17: ಸಂಗೀತ ಕಲೆಯ ಪ್ರತಿಭೆಗಳಿಗೆ ಇಲ್ಲಿನ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿ ಸಂಗೀತ ಸ್ಪರ್ಧೆಯ ಮೂಲಕ ಉತ್ತೇಜನ ನೀಡಿರುವದು ಮಕ್ಕಳಲಿ,್ಲ ಯುವಕ - ಯುವತಿಯರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಒಂದು ಉತ್ತಮ ಅವಕಾಶ. ಸ್ಪರ್ಧೆಯಲ್ಲಿ ಶ್ರದ್ಧೆ, ಛಲವನ್ನು ಅನುಸರಿಸಿದರೆ ಯಶಸ್ಸು ದೊರೆಯಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ವೆಂಕಟರಮಣ ದೇವಾಲಯದ ಮುಖ್ಯಸ್ಥರು, ಸಾಹಿತಿ, ಮಣಿಕಾರ ಗೋಪಾಲಕೃಷ್ಣ ಶ್ಯಾನುಭೋಗ್ ಹೇಳಿದರು.
ವೀರಾಜಪೇಟೆ ಬಸವೇಶ್ವರ ದೇವಾಲಯದ ಗೌರಿಗಣೇಶ ಉತ್ಸವ ಸಮಿತಿಯಿಂದ ದಿ.ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದೊಂದಿಗೆ ಇಲ್ಲಿನ ಬಸವೇಶ್ವರ ದೇವಾಲಯದ ಉತ್ಸವ ಸಮಿತಿಯ ವೇದಿಕೆಯಲ್ಲಿ ಇಂದು ಹಮ್ಮಿಕೊಂಡಿದ್ದ “ವಾಯ್ಸ್ ಆಫ್ ವಿರಾಜಪೇಟೆ 2018” ನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು, ಪ್ರತಿಭೆ ಎನ್ನುವದು ಎಲ್ಲರಲ್ಲಿಯೂ ಅಡಗಿರುತ್ತದೆ. ಅವರ ಪ್ರತಿಭೆಗಳನ್ನು ಗುರುತಿಸಲು ಸಂಘ ಸಂಸ್ಥೆಗಳ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಮೂಲೆ ಮೂಲೆಗಳಲ್ಲಿ ಅಡಗಿರುವ ಪ್ರತಿಭೆಗಳಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಸದಾವಕಾಶ ದೊರೆಯಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಉಚ್ಚ ನ್ಯಾಯಾಲಯದ ಎಂಪ್ಲಾಯಿಸ್ ಅಸೋಸಿಯೇಶನ್ ಅಧ್ಯಕ್ಷ ರಾಮು ಮಾತನಾಡಿ, ಸಂಗೀತ ಕಲೆ ಎನ್ನುವದು ಕೇವಲ ಮನರಂಜನೆ ಮಾತ್ರವಲ್ಲ. ಎಲ್ಲ ಸಂಗೀತಗಳು ಮನಸ್ಸಿಗೆ ನೆಮ್ಮದಿಯೊಂದಿಗೆ ಪರೋಕ್ಷವಾಗಿ ಆರೋಗ್ಯವನ್ನು ಕಾಪಾಡಲಿವೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಉದ್ಯಮಿ ಮಣಿಕಾರ ರಾಜೇಶ್ ಶ್ಯಾನುಭೋಗ್, ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿಯ ಅಧ್ಯಕ್ಷ ಎನ್.ಜಿ.ಕಾಮತ್ ಮಾತನಾಡಿದರು.
ವೇದಿಕೆಯಲ್ಲಿ ಜೆ.ಎನ್. ಪುಷ್ಪರಾಜ್, ಜೆ.ಎನ್ ಸಂಪತ್ ಕುಮಾರ್, ಎನ್ ವಿರೇಂದ್ರ ಕಾಮತ್ ಉಪಸ್ಥಿತರಿದ್ದರು.
‘ಎನ್. ವೆಂಕಟೇಶ್ ಕಾಮತ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಎನ್. ರವೀಂದ್ರನಾಥ್ ಕಾಮತ್ ಸ್ವಾಗತಿಸಿದರು. ಸ್ಪರ್ಧಿಗಳ ಹಾಡಿಗೆ ಶಿವಮೊಗ್ಗದ ಗೀತಾ ಆರ್ಕೆಸ್ಟ್ರಾ ತಂಡದವರು ನೀಡಿದ ಹಿನೆÀ್ನಲೆ ಸಂಗೀತ ಆಕರ್ಷಣೀಯವಾಗಿತ್ತು.