ವೀರಾಜಪೇಟೆ, ಸೆ. 17: ವೀರಾಜಪೇಟೆಯಲ್ಲಿರುವ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಇಲ್ಲಿನ ಮಿನಿ ವಿಧಾನ ಸೌಧದ ಮುಂದಿರುವ ಯೋಧರ ಸ್ತಂಭದ ಮುಂದೆ ಇಂದು ಸಂಘದ ಪರವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪುಷ್ಪಗುಚ್ಛ ಇರಿಸಿ ಶ್ರದ್ಧಾಂಜಲಿ ಅರ್ಪಿಸಿದರು.ಬಳಿಕ ಮಾತನಾಡಿದ ಬೋಪಯ್ಯ ಅವರು, ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವದು ನಮ್ಮೆಲ್ಲರ ಕರ್ತವ್ಯ. ಮಾಜಿ ಸಹಕಾರ ಸಂಘದ ಕ್ಯಾಂಟೀನ್‍ಗೆ ಮದ್ಯ ಮಾರಾಟದ ಪರವಾನಗಿ ಬೇಡಿಕೆಯನ್ನು ಸದÀ್ಯದಲ್ಲಿಯೇ ಈಡೇರಿಸಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಬ್ರಿಗೇಡಿಯರ್ ಮನೆಯಪಂಡ ಎಂ. ದೇವಯ್ಯ, ಮಡಿಕೇರಿ ಸೈನಿಕ
(ಮೊದಲ ಪುಟದಿಂದ) ಕಲ್ಯಾಣ ಕೇಂದ್ರದ ಜಂಟಿ ನಿರ್ದೇಶಕಿ ಲೆ. ಕರ್ನಲ್ ಗೀತಾ ಮಹಾಬಲಶೆಟ್ಟಿ, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಡಿ.ವೈಎಸ್.ಪಿ ನಾಗಪ್ಪ, ಸಂತ ಅನ್ನಮ್ಮ ದೇವಾಲಯದ ರೆ. ಫಾ. ಮದಲೈಮುತ್ತು, ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮಿ ಭೋಧ ಸ್ವರೂಪನಂದಜೀ, ಸಂಘದ ಅಧ್ಯಕ್ಷ ಚೇಂದ್ರಿಮಾಡ ನಂಜಪ್ಪ, ಉಪಾಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ, ಪುಗ್ಗೇರ ಎಸ್.ನಂದ, ಪಿ.ಎಂ.ಕರುಂಬಯ್ಯ, ಚೇನಂಡ ಎಂ. ಕಾರ್ಯಪ್ಪ ಮತ್ತಿತರರು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಮೃತ ಯೋಧರ ಸ್ಮರಣಾರ್ಥ ಯೋಧರ ಸ್ತಂಭಕ್ಕೆ ಪುಷ್ಪಗುಚ್ಛ ಅರ್ಪಿಸಿದ ನಂತರ ಜಿಲ್ಲಾ ಸಶಸ್ತ್ರ ಪೊಲೀಸರು ಗೌರವದೊಂದಿಗೆ ಮೂರು ಸುತ್ತು ಕುಶಲತೋಪು ಹಾರಿಸಿ ಗೌರವ ಸಲ್ಲಿಸಿದರು.