ಸೋಮವಾರಪೇಟೆ, ಸೆ. 17: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ದೇವಾಲಯ ಸಮೀಪದಲ್ಲಿರುವ ಕೋಟೆ ಕೆರೆ ಏರಿ ಕುಸಿಯುವ ಹಂತ ತಲಪಿದ್ದು, ಈಗಾಗಲೇ ಕೆಲವೆಡೆ ಬರೆ ಕುಸಿದಿದೆ. ಒಂದು ವೇಳೆ ಕೆರೆ ಏರಿ ಒಡೆದರೆ ಕೃಷಿ ಭೂಮಿ ಬರಡಾಗಲಿದ್ದು, ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೆರೆ ಏರಿ ಸಂಪೂರ್ಣ ಕುಸಿದರೆ ಎರಡು ಗ್ರಾಮಗಳು ಸಂಪರ್ಕ ಕಳೆದುಕೊಳ್ಳಲಿದ್ದು, ಹತ್ತಾರು ಏಕರೆ ಭತ್ತದ ಗದ್ದೆ ಬರಡಾಗಲಿದೆ. ಈ ಹಿನ್ನೆಲೆ ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದೇವಾಲಯ ಸಮಿತಿ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಮಂಜುನಾಥ್, ಗ್ರಾಮಸ್ಥರಾದ ಸುನಿಲ್, ಹೂವಯ್ಯ, ಪ್ರಸನ್ನ, ಮಹೇಶ್, ದಿಲೀಪ್, ಕೌಶಿಕ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.