ಗೋಣಿಕೊಪ್ಪ ವರದಿ, ಸೆ. 17 : ಜೆಸಿಐ ಪೊನ್ನಂಪೇಟೆ ನಿಸರ್ಗ ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮಕ್ಕೆ ತಿತಿಮತಿ ಲ್ಯಾಂಪ್ಸ್ ಅಕಾಡೆಮಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

ಹಸಿರೇ ಉಸಿರು ಎಂಬ ಸಂದೇಶ ಸಾರುವ ಯೋಜನೆಯಾಗಿ ಆವರಣದಲ್ಲಿ ಹಣ್ಣು ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಘಟಕದ ಅಧ್ಯಕ್ಷ ಮೂಡಗದ್ದೆ ವಿಕ್ರಂ, ಕಾರ್ಯದರ್ಶಿ ವಿನೋದ್ ಮೂಡಗದ್ದೆ, ಖಜಾಂಜಿ ಸಿಂಗಿ ಸತೀಶ್, ನಿರ್ದೇಶಕರುಗಳಾದ ಸ್ವಾಮಿ, ಸುರೇಶ್, ಪ್ರೀತಂ ಹಾಗೂ ಶಿಕ್ಷಕಿ ನೇಹಾ ಹಾಜರಿದ್ದರು.