ವೀರಾಜಪೇಟೆ ಸೆ:16 ಹಿಂದೂ ಬಾಂಧವರಲ್ಲಿ ಹಬ್ಬ ಹರಿದಿನಗಳ ಆಚರಣೆ ಬೇರೆ ಬೇರೆಯಾದರೂ ಧರ್ಮ ಎಂಬುದು ಒಂದೇ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಹಿಂದೂ ಧರ್ಮದಲ್ಲಿ ಹಿಂದೂಗಳು ಒಗ್ಗಟ್ಟನ್ನು ಸಾಧಿಸಿ ಸಮಾಜದ ಸುಧಾರಣೆಯೊಂದಿಗೆ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸಂಘ ಹಾಗೂ ತಾಲೂಕು ಆಡಳಿತದಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಪ್ರತಿಯೊಂದು ಸಮುದಾಯ ಗಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ

ವೀರಾಜಪೇಟೆ ಸೆ:16 ಹಿಂದೂ ಬಾಂಧವರಲ್ಲಿ ಹಬ್ಬ ಹರಿದಿನಗಳ ಆಚರಣೆ ಬೇರೆ ಬೇರೆಯಾದರೂ ಧರ್ಮ ಎಂಬುದು ಒಂದೇ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಹಿಂದೂ ಧರ್ಮದಲ್ಲಿ ಹಿಂದೂಗಳು ಒಗ್ಗಟ್ಟನ್ನು ಸಾಧಿಸಿ ಸಮಾಜದ ಸುಧಾರಣೆಯೊಂದಿಗೆ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸಂಘ ಹಾಗೂ ತಾಲೂಕು ಆಡಳಿತದಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಪ್ರತಿಯೊಂದು ಸಮುದಾಯ ಗಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ವಿಶ್ವಕರ್ಮ ದೇವರನ್ನು ಪೂಜಿಸುತ್ತಾರೆ. ಇದರಲ್ಲಿ ಯಾವ ಭಿನ್ನ ಬೇಧವಿಲ್ಲ, ವಿಶ್ವಕರ್ಮದ ಕುರಿತು ಹಿಂದಿನ ಪುರಾಣದ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು, ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್, ತಾಲೂಕು ಸಂಘದ ಅಧ್ಯಕ್ಷ ಕೆ.ಪಿ.ಪ್ರಶಾಂತ್, ವೀರಾಜಪೇಟೆ ಪಶುವೈದ್ಯ ಶಾಲೆಯ ಡಾ:ಗಿರೀಶ್, ಪೊನ್ನಂಪೇಟೆಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಹೇಶ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಎ.ಪಿ.ಲೋಕೇಶ್ ಸ್ವಾಗತಿಸಿ ನಿರೂಪಿಸಿ, ವಿಮಲಾ ದಶರಥ್ ವಂದಿಸಿದರು. ಸಮಾರಂಭದ ನಂತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ವಿಶ್ವಕರ್ಮದ ವಾರ್ಷಿ ಕೋತ್ಸವದ ಅಂಗವಾಗಿ ಇಲ್ಲಿನ ಗಣಪತಿ ದೇವಾಲಯದ ಪ್ರಮೋಷ ಸಭಾಂಗಣದಲ್ಲಿ ವಿಶ್ವಕರ್ಮ ಮಹಾ ಪೂಜಾ ಸೇವೆಯನ್ನು ಏರ್ಪಡಿಸಲಾಗಿತ್ತು.