ಮಡಿಕೇರಿ, ಸೆ. 16: ಹೊಸೂರು ಗ್ರಾಮ ಪಂಚಾಯಿತಿಯ ಕಳತ್ಮಾಡು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಹೊಸೂರು ಹಾಗೂ ಸೇವಾ ಭಾರತಿ ಕೊಡಗು ಇವರ ಸಹಭಾಗಿತ್ವದಲ್ಲಿ ಗೊಟ್ಟಡದ ಗೋಮಾಳ ಜಾಗದ ಹಣ್ಣಿನ ತೋಟವನ್ನು ಶ್ರಮದಾನ ಮೂಲಕ ಶುಚಿಗೊಳಿಸುವ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮ ಪಂಚಾಯತ್‍ನ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ನೇತೃತ್ವದಲ್ಲಿ ಸದಸ್ಯರು ಹಾಗೂ ಸಿಬ್ಬಂದಿ, ಸೇವಾ ಭಾರತಿ ಕೊಡಗು, ಸಾರ್ವಜನಿಕರು ಶ್ರಮದಾನದಲ್ಲಿ ಭಾಗಿಯಾಗಿದ್ದು, ಬಳಿಕ ಕಳತ್ಮಾಡು ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಶುಚಿಗೊಳಿಸಿ ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.