ಸೋಮವಾರಪೇಟೆ,ಸೆ.16: ಕಳೆದ ಆ.16 ರಂದು ಉಂಟಾದ ಜಲಪ್ರಳ ಯದಿಂದ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿ ರಸ್ತೆಗಳೇ ಕೊಚ್ಚಿಕೊಂಡು ಹೋಗಿದ್ದು, ಮರಳಿ ಸಂಪರ್ಕ ಸಾಧಿಸಲು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಲೋಕೋಪ ಯೋಗಿ ಇಲಾಖೆಯ ಅಭಿಯಂತ ರರು, ಗುತ್ತಿಗೆದಾರರು ತಿಂಗಳಿನಿಂದ ಫೀಲ್ಡ್‍ನಲ್ಲೇ ಇದ್ದಾರೆ. ಭಾನುವಾರವೂ ಸಹ ವಿಶ್ರಾಂತಿಗೆ ತೆರಳದ ರಂಜನ್, ರಸ್ತೆ ಸಂಪರ್ಕ ಅಂತಿಮ ಹಂತದಲ್ಲಿರುವ ಹಾಲೇರಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾರೆ.ಹತ್ತಾರು ಜೆಸಿಬಿ, ಹಿಟಾಚಿ ಯಂತ್ರಗಳು, ವಾಹನಗಳೊಂದಿಗೆ ನೂರಾರು ಮಂದಿ ಕಾರ್ಮಿಕರು ಸಮರೋಪಾದಿ ಕಾಮಗಾರಿಯಲ್ಲಿ ತೊಡಗಿದ್ದು, ತಾ. 17 ರಂದು (ಇಂದು) ಸಂಜೆಯೊಳಗೆ ಸೋಮವಾರಪೇಟೆ-ಹಟ್ಟಿಹೊಳೆ-ಮಡಿಕೇರಿ ರಸ್ತೆ ಸಂಪರ್ಕ ಕಲ್ಪಿಸಲಾಗು ವದು. ನಂತರ ಲಘುವಾಹನಗಳ ಸಂಚಾರಕ್ಕೆ ಅವಕಾಶ ಒದಗಿಸಲಾಗು ವದು ಎಂದು ಶಾಸಕ ರಂಜನ್ ತಿಳಿಸಿದ್ದಾರೆ.

ಶಾಸಕರೊಂದಿಗೆ ಲೋಕೋಪ ಯೋಗಿ ಇಲಾಖೆಯ ಅಭಿಯಂತರ ರಾದ ಶಿವಕುಮಾರ್, ಪೀಟರ್, ರಮಣಗೌಡ, ನಾಯಕ್, ಗುತ್ತಿಗೆದಾರರಾದ ಸುರೇಶ್, ಅಶ್ರಫ್, ಪ್ರಸಾದ್ ರೈ, ಲಾರೆನ್ಸ್, ಬಿಎಸ್‍ಆರ್ ಜಗದೀಶ್, ಚಂದ್ರಮೋಹನ್ ಅವರುಗಳೂ ಸಹ ಸ್ಥಳದಲ್ಲೇ ಇದ್ದು, ಹಗಲೂ ರಾತ್ರಿ ಕೆಲಸ ಮಾಡುವ ಮೂಲಕ ತಿಂಗಳ ನಂತರ ರಸ್ತೆ ಸಂಪರ್ಕ ಕಲ್ಪಿಸಲು ಸಾಹಸ ನಡೆಸುತ್ತಿದ್ದಾರೆ. ಹಟ್ಟಿಹೊಳೆ ಮಾರ್ಗವಾಗಿ ಮುಕ್ಕೋಡ್ಲು, ಆವಂಡಿ, ಹಚ್ಚಿನಾಡಿಗೆ ಫೋರ್ ವೀಲ್ ವಾಹನಗಳು ತೆರಳುವಷ್ಟರ ಮಟ್ಟಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಶಾಸಕ ರಂಜನ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.