ಸುಂಟಿಕೊಪ್ಪ, ಸೆ. 16: ಅಕ್ರಮ ವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಸುಂಟಿಕೊಪ್ಪ ಪೊಲೀಸರು ವಶಕ್ಕೆ ತೆಗೆದು ಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಸಮೀಪದ ಸೈಯದ್ ಎಂಬವರಿಗೆ ಸೇರಿದ ಸ್ಯಾಂಡಲ್‍ವುಡ್ ತೋಟದಿಂದ ಅಕ್ರಮವಾಗಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ತಮಿಳುನಾಡಿಗೆ 12 ಚಕ್ರದ ಟಿಎನ್36-ಎವಿ2887 ಲಾರಿಯಲ್ಲಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಇಲ್ಲಿನ ಪಿಎಸ್‍ಐ ಜಯರಾಮ್ ನೇತೃತ್ವದಲ್ಲಿ ಪೊಲೀಸರು ಧಾಳಿ ಮಾಡಿ ಲಾರಿಯನ್ನು ಮುಟ್ಟುಗೊಲು ಹಾಕುವದರೊಂದಿಗೆ ಚಾಲಕ ಪಿ. ರಂಜಿತ್ ಕುಮಾರ್ ಮೇಲೆ ಕೇಸು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.