ಕೂಡಿಗೆ, ಸೆ. 16: ಸೈನಿಕ ಶಾಲೆ ಕೊಡಗಿನ ಎನ್.ಸಿ.ಸಿ. ಘಟಕದ ವತಿಯಿಂದ ಸಿ.ಬಿ.ಎಸ್.ಸಿ.ಯ ಸ್ವಚ್ಛತಾ ಪಕ್ವಾಡ ಸುತ್ತೋಲೆಯ ಮೇರೆಗೆ ಕೂಡಿಗೆ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅಭಿಯಾನಕ್ಕೆ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಚಾಲನೆ ನೀಡಿದರು. ಈ ಸಂದರ್ಭ ಶಾಲೆಯ ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು ಉಪಸ್ಥಿತರಿದ್ದರು.

ಅಭಿಯಾನ ಶಾಲೆಯ ಮುಖ್ಯ ದ್ವಾರದಿಂದ ಹೊರಟು ಹಳೇ ಕೂಡಿಗೆಯ ಮುಖ್ಯ ವೃತ್ತದವರೆಗೆ ಬಂದಿತು. ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಆರು ಗುಂಪುಗಳನ್ನಾಗಿ ವಿಭಾಗ ಮಾಡಿ, ಗ್ರಾಮದ ವಿವಿಧ ಮುಖ್ಯ ಬೀದಿಗಳಲ್ಲಿ ಸಂಚಾರವನ್ನು ಮಾಡಿ ನಿರುಪಯುಕ್ತ ಪ್ಲಾಸ್ಟಿಕ್, ಬಾಟಲ್, ಹಾಳೆ, ಕವರ್, ತ್ಯಾಜ್ಯ ವಸ್ತುಗಳು ಮತ್ತು ಇತ್ಯಾದಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಯಿತು. ಈ ಅಭಿಯಾನದ ಸಂದರ್ಭ ಕೂಡಿಗೆಯ ವೃತ್ತದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಕೈಯನ್ನು ಸ್ವಚ್ಛವಾಗಿ ತೊಳೆಯುವ ಮಹತ್ವದ ಕುರಿತು ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಸ್ವಚ್ಛತಾ ಅಭಿಯಾನಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಕಳೆದ 15 ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಅಭಿಯಾನಕ್ಕೆ ಕೂಡಿಗೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಕೂಡಿಗೆಯ ಗ್ರಾಮಸ್ಥರು ಸಹಕಾರವನ್ನು ನೀಡಿದರು. ಶಾಲೆಯ ಲೆಫ್ಟಿನೆಂಟ್ ವಿಬಿನ್ ಕುಮಾರ್, ಎಸ್/ಓಗಳಾದ ಮಂಜಪ್ಪ ಜಿ.ಕೆ., ವೆಂಕಟರಮಣ, ವೈ, ಶಿಕ್ಷಕರಾದ ಗೋವಿಂದ ರಾಜ್ ಕೆ, ಲೀಲಾವತಿ, ಅಶೋಕ್ ವೈ ಕೆಂಗಾರೆ, ಪ್ರಸಾದ್ ಎಂ.ಹೆಚ್., ರಾಘವೇಂದ್ರ ರಾಜೆ ಅರಸ್, ಅಶೋಕನ್ ಹಾಗೂ 8,9,10ನೇ ತರಗತಿಯ 258 ಮಕ್ಕಳು ಭಾಗಿಯಾಗಿದ್ದರು.