ಮಡಿಕೇರಿ, ಸೆ. 16: ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಕಲ್ಲುಗುಂಡಿಯಲ್ಲಿ ಶಾಲಾ ಆಡಳಿತ ಮಂಡಳಿಯವರ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಕಿರಿಪುಷ್ಪ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ರೋಸಿ ಅವರನ್ನು ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಅಧ್ಯಕ್ಷರಾದ ಇ.ವಿ. ಪ್ರಶಾಂತ್ ಅವರು ಸನ್ಮಾನಿಸಿದರು. ಸಂಸ್ಥೆಯ ಸಂಚಾಲಕರಾದ ನವೀನ್ ಪ್ರಕಾಶ್ ಪಿಂಟೋ, ಕ್ಲಬ್ಬಿನ ಸದಸ್ಯರಾದ ಸುರೇಶ್, ನಳಿನಿ ಕಿಶೋರ್, ಸಿಲ್ವೇಸ್ಟರ್, ಇ.ವಿ. ಪ್ರಶಾಂತ್, ಕಿಶೋರ್ ಪಿ.ಬಿ, ಅಪ್ಪಣ್ಣ, ಮತ್ತು ನವೀನಚಂದ್ರ ಉಪಸ್ಥಿತರಿದ್ದರು.