ಸಿದ್ದಾಪುರ, ಸೆ. 16: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಎಸ್. ಚೆಟ್ಟಳ್ಳಿ ಸರ್ಕಾರಿ ಶಾಲೆಯ ಅಕ್ಷರ ದಾಸೋಹ ಕಟ್ಟಡದ ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ನೆರವೇರಿಸಿದರು. ಈ ಸಂದರ್ಭ ತಾ.ಪಂ ಸದಸ್ಯ ಬಲ್ಲರಂಡ ಮಣಿ ಉತ್ತಪ್ಪ ಹಾಗೂ ಗ್ರಾ.ಪಂ. ಸದಸ್ಯರುಗಳು ಇತರರು ಹಾಜರಿದ್ದರು.