ವೀರಾಜಪೇಟೆ, ಸೆ. 12: ವೀರಾಜಪೇಟೆಯಲ್ಲಿ ಗೌರಿ ಗಣೇಶೋತ್ಸವ ಪ್ರಯುಕ್ತ ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಇಂದು ಮುಖ್ಯಬೀದಿಗಳಲ್ಲಿ ಗೌರಿ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.
ಗೌರಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ಗೌರಿ ಪಲ್ಲಕ್ಕಿಗೆ ಮುತ್ತೈದೆಯರು ಶ್ರದ್ಧಾ ಭಕ್ತಿಯಿಂದ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 8ಗಂಟೆಗೆ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ದಿ: ಡಾ:ಎನ್.ಬಿ.ಉತ್ತಪ್ಪ ಅವರ ಕೆರೆಯಿಂದ ನಾದಸ್ವರ ವಾದ್ಯಗೋಷ್ಠಿಯೊಂದಿಗೆ ಆರಂಭಗೊಂಡ ಗೌರಿ ಪಲ್ಲಕ್ಕಿ ಉತ್ಸವ ಮೆರವಣಿಗೆ ತೆಲುಗರಬೀದಿಯಿಂದ ಮೊಗರಗಲ್ಲಿಯವರೆಗೆ ತಲುಪಿ ಹಿಂತಿರುಗಿ ಜೈನರಬೀದಿ, ಫೀ. ಮಾರ್ಷಲ್ ಕಾರ್ಯಪ್ಪ ರಸ್ತೆ ಮಾರ್ಗವಾಗಿ ಮೂರ್ನಾಡು ರಸ್ತೆ, ದೇವರ ಕಾಡು ರಸ್ತೆ, ಅಪ್ಪಯ್ಯ ಸ್ವಾಮಿ ರಸ್ತೆ ಮಾರ್ಗವಾಗಿ ರಾತ್ರಿ 8ಗಂಟೆಗೆ ಬಸವೇಶ್ವರ ದೇವಸ್ಥಾನವನ್ನು ತಲುಪಿದ ನಂತರ ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.