ಮಡಿಕೇರಿ, ಸೆ. 12: ಗೋಣಿಕೊಪ್ಪಲು ವಿದ್ಯುತ್ ಇಲಾಖೆಯ ಯಂತ್ರ ಕಾರ್ಮಿಕ ರೊಬ್ಬರು ನಿಯಮ ಮೀರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುತ್ತಿ ದ್ದಾರೆಂದು ವೀರಾಜಪೇಟೆ ತಾಲೂಕು ವಿದ್ಯುಚ್ಛಕ್ತಿ ಗುತ್ತಿಗೆದಾರರ ಸಂಘ ಆರೋಪಿಸಿದೆ. ಈ ಕುರಿತು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಲಿಖಿತ ದೂರು ನೀಡಿದೆ.

ಯಂತ್ರ ಕಾರ್ಮಿಕ ಸಿದ್ಧರಾಜು ಅವರು ವಿದ್ಯುತ್ ಕಂಬ ಹಾಗೂ ಮಾರ್ಗಗಳನ್ನು ನಿಗಮದ ನಿಯಮಾನುಸಾರ ಮಾಡದೆ, ನಿಗಮಕ್ಕೆ ಪಾವತಿಸಬೇಕಾದ ಶುಲ್ಕವನ್ನು ನೀಡದೆ ಕೆಲಸ ಪೂರೈಸಿ ಅವ್ಯವಹಾರ ನಡೆಸಿದ್ದಾರೆಂದು ದೂರಲಾಗಿದೆ. ಗುತ್ತಿಗೆದಾರರು ಮಾಡಬೇಕಾದ ಕೆಲಸವನ್ನು ತಾನೇ ಮಾಡಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.