ಮಡಿಕೇರಿ, ಸೆ. 12: 2018-19ನೇ ಸಾಲಿನ ಕೆ.ನಿಡುಗಣೆ ಗ್ರಾ.ಪಂ.ಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮಸಭೆ ತಾ. 14ರಂದು ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ಪಾಲ್ಗೊಳ್ಳಲಿದ್ದು, ಗ್ರಾಮ ಪಂಚಾಯಿತಿ ಆವರಣದಲ್ಲಿ ಸಭೆ ಜರುಗಲಿದೆ.