ಮಡಿಕೇರಿ, ಸೆ. 12: ಎಂ. ಬಾಡಗ ಗ್ರಾಮದ ಚೌರೀರ ತಿಮ್ಮಯ್ಯ (ಬಾಬಣ್ಣ-90) ತಾ. 7 ರಂದು ನಿಧನ ಹೊಂದಿದರು. ಮೂಲತಃ ಕೃಷಿಕರಾಗಿದ್ದ ಬಾಬಣ್ಣ, ಶಾಲಾ ದಿನಗಳಲ್ಲಿ ಕ್ರೀಡಾಸಕ್ತರಾಗಿದ್ದು, ಹಲವು ಕ್ರೀಡೆಗಳಲ್ಲಿ ಹೆಸರು ಗಳಿಸಿದವರು. ಕೃಷಿಯೊಂದಿಗೆ ದರ್ಜಿ ಕಸುಬನ್ನೂ ಕಲಿತುಕೊಂಡ ಅವರು, ಸಂಗೀತದಲ್ಲೂ ಆಸಕ್ತರಾಗಿದ್ದು, ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ಹಾಗೂ ಕೀಬೋರ್ಡ್ ವಾದ್ಯಗಳನ್ನು ನುಡಿಸಿದವರು. ಉತ್ತಮ ಯೋಗಪಟು ಕೂಡ ಆಗಿದ್ದ ಬಾಬಣ್ಣ ಅವರ ಪ್ರತಿಭೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿದ್ದವು.