ಮಡಿಕೇರಿ, ಸೆ. 11: ಇಲ್ಲಿನ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ‘ನೋ ಬ್ಯಾಗ್ ಡೇ’ ಅನ್ನು ಆಚರಿಸಲಾಯಿತು. ಮಕ್ಕಳಲ್ಲಿರುವ ಕ್ರಿಯಾತ್ಮಕ ಪ್ರತಿಭೆಯನ್ನು ಹೊರ ತರುವ ಉದ್ದೇಶದೊಂದಿಗೆ ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಅವಕಾಶ ಕಲ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಸುನೀತ ಮುಖ್ಯ ಅತಿಥಿಗಳಾಗಿ ಲತಾ ಚಂಗಪ್ಪ, ಕನುದೇವರಾಜ್, ನಮಿತಾ ರಾವ್ ಆಗಮಿಸಿದ್ದರು. ಸಯ್ಯದ್ ಹುಸ್ನ ಸ್ವಾಗತಿಸಿದರು. ಚೈತ್ರ ವಂದಿಸಿದರು.