ಮಡಿಕೇರಿ, ಸೆ. 11: ಸುಂಟಿಕೊಪ್ಪ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರೀಅತ್ತ್ ಕಾಲೇಜಿನಲ್ಲಿ ‘ಸಮ’ ಎಂಬ ವಿದ್ಯಾರ್ಥಿ ಸಂಘಟನೆಯನ್ನು ರೂಪೀಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಝೈನುದ್ದೀನ್ ಫೈಝಿ ಇರ್ಫಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘಟನೆಯ ಅಧ್ಯಕ್ಷರಾಗಿ ರಮೀಝ್ ಆರ್. ಸಿದ್ದಾಪುರ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಝೈನುಲ್ ಆಬಿದೀನ್ ಸಿದ್ದಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಸ್ಲಂ ಮಾಪಿಳ್ಳೆತೋಡು, ಜೊತೆ ಕಾರ್ಯದರ್ಶಿಯಾಗಿ ಸಿನಾರ್ ಎಡಪಾಲ, ಖಜಾಂಚಿಯಾಗಿ ಇರ್ಫಾನ್ ಸಿದ್ದಾಪುರ, ವಿಭವಶೇಶಿಯ ಅಧ್ಯಕ್ಷರಾಗಿ ಕಮರುದ್ದೀನ್ ವೀರಾಜಪೇಟೆ, ಸಂಚಾಲಕರಾಗಿ ಆಸಿಫ್ ನೆಲ್ಯಹುದಿಕೇರಿ, ಇರ್ಫಾನ್ ಸಿದ್ದಾಪುರ, ಭಾಷಣ ತರಬೇತಿ ಸಂಯೋಜಕರಾಗಿ ಅಫೀಫ್ ನಲ್ವತ್ತೆಕ್ರೆ, ಸಂಚಾಲಕರಾಗಿ ಯಾಸೀನ್ ಕೆ.ಎ. ಸಿದ್ದಾಪುರ, ಸಿದ್ಧೀಕ್ ಮಡಿಕೇರಿ, ‘ಸಮಾಜ ಸೇವೆ’ ಕಾರ್ಯಕರ್ತರಾಗಿ ಯಾಸೀನ್ ಕೆ.ಯು. ಎಡಪಾಲ, ಸಲೀಂ ಚೋಕಂಡಳ್ಳಿ, ನೌಶಾದ್ ಮಡಿಕೇರಿ, ಗ್ರಂಥಾಲಯ ಅಧ್ಯಕ್ಷರಾಗಿ ಅಶ್ರಫ್ ಗುಂಡಿಗೆರೆ, ಸಂಚಾಲಕರಾಗಿ ಫಯಾಝ್ ಎಡಪಾಲ, ಅಜ್ಮಲ್ ಸಿ.ಎಂ. ಸೋಮವಾರಪೇಟೆ, ಮಾಧ್ಯಮ ವಿಭಾಗದ ಪ್ರಧಾನ ಸಂಪಾದಕರಾಗಿ ಝೈನುಲ್ ಆಬಿದ್ ಶನಿವಾರಸಂತೆ, ಸಹ ಸಂಪಾದಕರಾಗಿ ಶರೀಫ್ ಗರಗಂದೂರು, ಶಹ್ನಾಜ್, ಅದ್ನಾನ್ ವೀರಾಜಪೇಟೆ, ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ನಜ್ಮುದ್ದೀನ್ ಬಜೆಕೊಲ್ಲಿ, ಸಂಚಾಲಕರಾಗಿ ಅಸೀಬ್ ನಲ್ವತ್ತೆಕ್ರೆ, ಮುತ್ತಲಿಬ್ ವೀರಾಜಪೇಟೆ ಇವರುಗಳನ್ನು ಆಯ್ಕೆ ಮಾಡ ಲಾಯಿತು. ಕಾಲೇಜಿನ ಪ್ರೊಫೆಸರ್ ಜಬ್ಬಾರ್ ಹುದವಿ ಸ್ವಾಗತಿಸಿ, ವಂದಿಸಿದರು.