ನಾಪೋಕ್ಲು, ಸೆ. 11: ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ವಿಭಾಗದ ವಲಯಮಟ್ಟದ ಕ್ರೀಡಾಕೂಟ ನಡೆಯಿತು. ಬಾಲಕರ ವಿಭಾಗದ ಖೋ-ಖೋ ಸ್ಪರ್ಧೆಯಲ್ಲಿ ಚೆಯ್ಯಂಡಾಣೆಯ ನರಿಯಂದಡ ಪ್ರೌಢಶಾಲೆಯ ತಂಡ ಗೆಲವು ಸಾಧಿಸಿ ತಾಲೂಕುಮಟ್ಟಕ್ಕೆ ಪ್ರವೇಶ ಪಡೆಯಿತು. ಕಬಡ್ಡಿ ಸ್ಪರ್ಧೆಯಲ್ಲಿ ಮರ್ಕಝ್ ಶಾಲೆಯ ವಿದ್ಯಾರ್ಥಿಗಳು ಗೆಲವು ಸಾಧಿಸಿದರೆ ಹಾಕಿಯಲ್ಲಿ ಪಾರಾಣೆ ಶಾಲೆಯ ವಿದ್ಯಾರ್ಥಿಗಳ ತಂಡ ಜಯಗಳಿಸಿತು. ಥ್ರೋಬಾಲ್ ಸ್ಪರ್ಧೆಯಲ್ಲಿ ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗೆಲವು ಸಾಧಿಸಿದರೆ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚೆಯ್ಯಂಡಾಣೆಯ ನರಿಯಂದಡ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಯಗಳಿಸಿದರು. ಫುಟ್‍ಬಾಲ್ ಸ್ಪರ್ಧೆಯಲ್ಲಿ ಮರ್ಕಝ್ ಶಾಲೆಯ ವಿದ್ಯಾರ್ಥಿಗಳು ಗೆಲವು ಸಾಧಿಸಿದರು.
ಬಾಲಕಿಯರ ವಿಭಾಗದ ಖೋ-ಖೋ ಸ್ಪರ್ಧೆಯಲ್ಲಿ ಪಾರಾಣೆ ಶಾಲೆಯ ವಿದ್ಯಾರ್ಥಿಗಳ ತಂಡ ಗೆಲವು ಸಾಧಿಸಿ ತಾಲೂಕುಮಟ್ಟಕ್ಕೆ ಪ್ರವೇಶ ಪಡೆದರೆ, ಕಬಡ್ಡಿ ಸ್ಪರ್ಧೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗೆಲವು ಸಾಧಿಸಿದರು. ಥ್ರೋಬಾಲ್ ಸ್ಪರ್ಧೆಯಲ್ಲಿ ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಯಗಳಿಸಿದರು.