ಸೋಮವಾರಪೇಟೆ, ಸೆ. 11: ಪಶುಪಾಲನಾ ಇಲಾಖೆಯಿಂದ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಸುಮಾರು 55 ಮಂದಿ ಪಶುಪಾಲಕರಿಗೆ, ತಮ್ಮ ಜಾನುವಾರುಗಳ ಪೋಷಣೆಗಾಗಿ ಪಶು, ಹಂದಿ ಆಹಾರ ಮತ್ತು ಲವಣ ಮಿಶ್ರಣಗಳನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳು ವಿತರಿಸಿದರು. ಗರ್ವಾಲೆ ಗ್ರಾ.ಪಂ. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾ.ಪಂ. ಅಧ್ಯಕ್ಷ ಸುಭಾಷ್, ಇಲಾಖಾ ಸಿಬ್ಬಂದಿಗಳಾದ ಸತ್ತರ್‍ಖಾನ್, ವನಜಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.