ಗೋಣಿಕೊಪ್ಪ ವರದಿ, ಸೆ. 11: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ವೀರಾಜಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಾತೃವಂದನಾ ಸಪ್ತಾಹವನ್ನು ಬಾಳುಗೋಡು ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಸೀತಾಲಕ್ಷ್ಮಿ ಅವರು ತಾಯಿ-ಮಗುವಿನ ಬೆಳವಣಿಗೆಗೆ ಇಲಾಖೆಯಿಂದ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗರ್ಭಿಣಿಯರು, ಬಾಣಂತಿಯರು ಹಾಗೂ ವಿವಿಧ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಾಡ ಬೆಳ್ಯಪ್ಪ ಪಾಲ್ಗೊಂಡಿದ್ದರು. ಚೇಮೀರ ಸೀತಮ್ಮ ಪ್ರಾರ್ಥಿಸಿದರು. ಶಾಂತಿ ಸ್ವಾಗತಿಸಿದರು. ಪೂವಮ್ಮ ವಂದಿಸಿದರು.