ಶನಿವಾರಸಂತೆ, ಸೆ. 11: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಜೇನುಕುರುಬರ ಅಪ್ಪಣ್ಣ ಎಂಬವರ ಮನೆಯಲ್ಲಿ ವಾಸವಿದ್ದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದು, ಮಡಿಕೇರಿಯ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಕುರಿತು ವಿಚಾರಿಸಿದಾಗ ಅಪ್ಪಣ್ಣ ಅವರ ಪುತ್ರ ಆಕೆಯನ್ನು ತಾನು ವಿವಾಹವಾಗಿರುವದಾಗಿ ಹೇಳಿದ್ದಾನೆ.
ವೈದ್ಯರು ವಯಸ್ಸಿನ ದೃಢೀಕರಣ ಕೇಳಲಾಗಿ ಬಾಲಕಿ ತನಗೆ 14 ವರ್ಷ ಎಂದು ತಿಳಿಸಿರುತ್ತಾಳೆ. ಮಾಲಂಬಿ ಗಿರಿಜನ ಆಶ್ರಮ ಶಾಲೆಯಿಂದ ಸುಳ್ಳು ದಾಖಲೆ ಪಡೆಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡುವಂತೆ ಆಲೂರು ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ಹಾಗೂ ಆಶ್ರಮ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಲಿಂಗಯ್ಯ ಅವರುಗಳು ಕುಶಾಲನಗರ ಮಕ್ಕಳ ಸಹಾಯವಾಣಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.