*ಸುಂಟಿಕೊಪ್ಪ, ಸೆ. 11: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಆಹಾರ ಕಿಟ್ ವಿತರಿಸಬೇಕು ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಅತ್ತೆ ಮನೆಯಲ್ಲಿ ನಿರಾಶ್ರಿತರಿಗೆ ಸೇರಿದ ಆಹಾರ ಶೇಖರಿಸಿಟ್ಟದ್ದು, ಇವರು ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಪಂಚಾಯಿತಿಗೆ ವಾಹನ ಚಾಲಕ ಸುರೇಶ ನೇತೃತ್ವದಲ್ಲಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಕರಣ ನಡೆದಿದೆ. ಕಂದಾಯ ಪರಿವೀಕ್ಷರು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಹರದೂರು ಗ್ರಾಮ ಪಂಚಾಯಿತಿಯಲ್ಲಿ ಕೂಲಿ ಕಾರ್ಮಿ ಕರು ಅಧಿಕ ಸಂಖ್ಯೆಯಲ್ಲಿದ್ದು, ಜಲಪ್ರಳಯದ ನಂತರ ಇವರಿಗೆ ಕೆಲಸವಿಲ್ಲದೆ ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರಿಗೆ ಈ ಹಿಂದೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರೆ ನಿರಾಶ್ರಿತರಿಗೆ ಸೇರಿದ ಆಹಾರವನ್ನು ಶೇಖರಿಸಿದ್ದು, ಕಂದಾಯ ಅಧಿಕಾರಿ ಗಳು ತಮ್ಮ ವಶಕ್ಕೆ ಪಡೆದುಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಹೆಚ್.ಎಸ್. ಶಿವಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪಕೃತಿ ವಿಕೋಪದಿಂದ ಮನೆ, ಆಸ್ತಿ ಕಳೆದು ಕೊಂಡವರಿಗೆ ಆಹಾರ ಕಲ್ಪಿಸಲಾಗಿದೆ. ಕೆಲವೆಡೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನಕ್ಕೆ ತೊಂದರೆಯಾಗಿದೆÉ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿದರೆ ಇದರ ಬಗ್ಗೆ ಪರಿಶೀಲಿಸಿ ಆಹಾರ ಪೂರೈಸಲಾಗುವದು ಎಂದರು.
ವಾಹನ ಚಾಲಕ ಹಾಗೂ ಸಮಾಜ ಸೇವಕ ಸುರೇಶ ಮತ್ತು ಮೊಗೇರ ಸಂಘದ ಹೋಬಳಿ ಸಂಘಟನಾ ಕಾರ್ಯದರ್ಶಿ ಪೂವಪ್ಪ ಮಾತನಾಡಿ. ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ ಅವರು ನಿರಾಶ್ರಿತರಿಗೆ ಸೇರಿದ ಆಹಾರ ಪದಾರ್ಥ ಮೊಗೇರ ಸಂಘಕ್ಕೆ ಮಾತ್ರ ಸೇರಿದಲ್ಲ ಎಲ್ಲಾ ಜಾತಿಯ ನಿರಾಶ್ರಿತರಿಗೆ ಸೇರಿದೆ ಅವರು ಇದನ್ನು ಸರಕಾರದ ಸ್ವಾಧೀನಕ್ಕೆ ಒಳಪಡಿಸದೆ ತಮ್ಮ ಸಂಬಂಧಿಕರ ಮನೆಯಲ್ಲಿಟ್ಟು ಮೊಗೇರ ಸಂಘಕ್ಕೆ ಕೆಟ್ಟ ಹೆಸರು ತಂದಂತಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ, ಸಕಲೇಶಪುರ ಮೊಗೇರ ಸಮಾಜದಿಂದ ನಿರಾಶ್ರಿತರಿಗೆ ಅಕ್ಕಿ ಇತರ ಸಾಮಗ್ರಿ ಬಂದಿದ್ದು ಕಾಂಡನಕೊಲ್ಲಿಗೆ ಸಾಗಿಸಲು ಸಾಧ್ಯವಾಗದ ಕಾರಣ ತನ್ನ ಸಂಬಂಧಿಕರ ಮನೆಯಲ್ಲಿರಿಸಿದ್ದು ನಿಜ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಎಂದರು. ಇದಕ್ಕೆ ಮಣಿದ ಪ್ರತಿಭಟನಾ ಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಪ್ರತಿಭಟನೆ ಸಂದರ್ಭ ಗ್ರಾಮ ಲೆಕ್ಕಾಧಿಕಾರಿ ನಾಗೇಶ್ ರಾವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ, ಪಂಚಾಯಿತಿ ಅಧ್ಯಕ್ಷೆ ಸುಮ, ಗ್ರಾಮಸ್ಥರಾದ ಸಾವಿತ್ರಿ, ಕಮಲ, ಲವಕುಮಾರ್, ಬೇಬಿ, ಸುಮಿತ್ರ, ಕೆ.ಟಿ. ಗೋಪಾಲ, ಯಾಕೂಬ್, ಪ್ರೇಮ, ನೇತ್ರ, ಸುಶೀಲ ಹಾಗೂ ಕಾಂಡನಕೊಲ್ಲಿ ಗ್ರಾಮಸ್ಥರು ಹಾಜರಿದ್ದರು. ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್. ಜಯರಾಮ್ ಎಎಸ್‍ಐ ಪಾರ್ಥ