ಮಡಿಕೇರಿ, ಸೆ. 10: ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದಲ್ಲಿ ಅಲ್ಲಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಪ್ರೌಢಶಾಲಾ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಪ.ಪೂ. ಕಾಲೇಜಿನ ಪ್ರೌಢಶಾಲಾ ತಂಡದ ಸೆಮಿಫೈನಲ್‍ನಲ್ಲಿ ಸೋಲು ಕಂಡಿದೆ.

ಇಂದು ಹಾಸನ ತಂಡದೊಂದಿಗೆ ನಡೆದ ಪಂದ್ಯದಲ್ಲಿ ಪೊನ್ನಂಪೇಟೆ ತಂಡ 3-0 ಗೋಲುಗಳಿಂದ ಸೋಲನುಭವಿಸಿದೆ. ತಾ. 11 ರಂದು (ಇಂದು) ಮೂರನೇ ಸ್ಥಾನಕ್ಕಾಗಿ ತಂಡ ಬೆಂಗಳೂರಿನ ಚಿನ್ಮಯಿ ಶಾಲಾ ತಂಡದೊಂದಿಗೆ ಸೆಣೆಸಲಿದೆ.