ಮಡಿಕೇರಿ, ಸೆ. 10: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಿಗೆ ನೆರವು ಪರಿಹಾರ ನೀಡುವ ನಿಟ್ಟಿನಲ್ಲಿ ಭಾರತೀಯ ವಿದ್ಯಾಭವನ, ಬೆಂಗಳೂರು, ಕೊಡಗು ಕೇಂದ್ರ ಹಾಗೂ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಆಶ್ರಯದಲ್ಲಿ ವಿದ್ಯಾಭವನ ಸಭಾಂಗಣದಲ್ಲಿ ಅಂಬಳೆ ಹೇಮಂತ್, ಹೇರಂಭ ಸಹೋದರರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.

ವಯೋಲಿನ್‍ನಲ್ಲಿ ವೈಭವ್ ರಮಣಿ, ಮೃದಂಗದಲ್ಲಿ ಬಿ.ಎಸ್. ಪ್ರಶಾಂತ್, ಮೋರ್ಸಿಂಗ್‍ನಲ್ಲಿ ಚಿದಾನಂದ ಸಹಕರಿಸಿದರು. ವಾದನದಲ್ಲಿ ಲಭಿಸಿದ ಹಣವನ್ನು ನಿರಾಶ್ರಿತರಿಗೆ ಮನೆ ನಿರ್ಮಿಸಲು ಬಳಸಲು ವಿದ್ಯಾಭವನ ಇನ್ಫೋಸಿಸ್ ಫೌಂಡೇಶನ್ ತೀರ್ಮಾನಿಸಿದೆ.