ವೀರಾಜಪೇಟೆ, ಸೆ. 10: ಮಗ್ಗುಲ ಗ್ರಾಮದ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿತು.
ಕೊನೆಯ ಶ್ರಾವಣದ ಪ್ರಯುಕ್ತ ಶನೀಶ್ವರನಿಗೆ ಬೆಳಿಗ್ಗೆ 7 ಗಂಟೆಗೆ ಗಣ ಹೋಮ, ಅಭಿಷೇಕ, ವಿಶೇಷ ಪೂಜೆಗಳು, ಮಹಾಪೂಜಾ ಸೇವೆ ಬಳಿಕ ಅನ್ನಸಂತರ್ಪಣೆ ಜರುಗಿತು.
ದೇವಾಲಯದ ಸಭಾಂಗಣದಲ್ಲಿ ಉಳುವಂಗಡ ಕಾವೇರಿ ಉದಯ ಬರೆದ ಕೊಡಗಿನ ಪುಣ್ಯಭೂಮಿ ಮಗ್ಗುಲದ ಪವಿತ್ರ ನೆಲೆ ಶನೇಶ್ವರ ಮತ್ತು ನವಗ್ರಹ ದೇವಸ್ಥಾನ ಎಂಬ ದೇವಪುರಾಣ ಕಿರುಪರಿಚಯ ಮತ್ತು ಭಕ್ತಿಗೀತೆಗಳ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ದೇವಾಲಯದ ಅಧ್ಯಕ್ಷ ಚೋಕಂಡ ರಮೇಶ್, ಪೆಮ್ಮಂಡ ಪೊನ್ನಪ್ಪ, ಕೊಟ್ಟೆಮಾಡ ರಾಜಮಣಿ, ಉಳುವಂಗಡ ಉದಯ್ ಮುಂತಾದವರು ಉಪಸ್ಥಿತರಿದ್ದರು.
* ಮಲೆತಿರಿಕೆ ಬೆಟ್ಟದಲ್ಲಿರುವ ಶನೀಶ್ವರ ದೇವಸ್ಥಾನದಲ್ಲಿ ಶ್ರಾವಣವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕೊನೆ ಶ್ರಾವಣದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಶುದ್ಧ ಕಳಸ, ಅಭಿóಷೇಕ ನಂತರ ವಿವಿಧ ಪೂಜೆಗಳು ಜರುಗಿದವು. ಅಪರಾಹ್ನ ಮಹಾ ಪೂಜಾ ಸೇವೆಯ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ರಾತ್ರಿ ವಾದ್ಯಗೋಷ್ಠಿ ಚಂಡೆಮೇಳದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.