ಮಡಿಕೇರಿ, ಸೆ. 10: ಗಣೇಶೋತ್ಸವ ಆಚರಣೆ ಸಂದರ್ಭ ಕಾನೂನಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಡಿವೈಎಸ್ಪಿ ಸುಂದರ್ ರಾಜ್ ಗಣಪತಿ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಸಲಹೆಯಿತ್ತರು.

ಮಡಿಕೇರಿ ನಗರ ಠಾಣೆಯಲ್ಲಿಂದು ಆಯೋಜಿಸಲಾಗಿದ್ದ ಗಣಪತಿ ಉತ್ಸವ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಮಡಿಕೇರಿ ನಗರವ್ಯಾಪ್ತಿಯಲ್ಲಿ ಎಲ್ಲಾ ಗಣಪತಿ ಉತ್ಸವ ಸಮಿತಿಗಳು ಕೂಡ ಸರಳ ಆಚರಣೆಗೆ ತೀರ್ಮಾನ ಕೈಗೊಂಡಿರುವದಾಗಿ ಇಲಾಖೆಗೆ ಮಾಹಿತಿ ನೀಡಿದ್ದಾರೆ ಇದು ಶ್ಲಾಘನೀಯ ವಿಚಾರ. ಪ್ರತಿಯೊಂದು ಸಮಿತಿಗಳು ಕೂಡ ಧ್ವನಿ ವರ್ಧಕ ಬಳಕೆಗೆ,ಮೆರವಣಿಗೆಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.ಗಣಪತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಅನಾಹುತಗಳಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಷ್ಟಾಪನಾ ದಿನದಿಂದ ವಿಸರ್ಜನೆಯವರೆಗೂ ಯಾವದೇ ಕಲಹಗಳಾಗದ ರೀತಿಯಲ್ಲಿ ಸಮಿತಿಗಳು ಎಚ್ಚರವಹಿಸಬೇಕು.ಏನೇ ತೊಂದರೆಗಳಾದರೂ ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಸುಂದರ್ ರಾಜ್ ನಿರ್ದೇಶನ ನೀಡಿದರು.

ಈ ಸಂದರ್ಭ ನಗರ ವೃತ್ತ ನಿರೀಕ್ಷಕ ಮೇದಪ್ಪ .ಠಾಣಾಧಿಕಾರಿ ಷಣ್ಮುಗ ಉಪಸ್ಥಿತರಿದ್ದರು.