ವೀರಾಜಪೇಟೆ, ಸೆ. 10: ವೀರಾಜಪೇಟೆಯ ಗಾಂಧಿನಗರದ ಗಣಪತಿ ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಚಿಲ್ಲವಂಡ ಗಣಪತಿ ಗೌ: ಅಧ್ಯಕ್ಷರಾಗಿ ಕುಯ್ಮಂಡ ರಾಕೇಶ್, ಉಪಾಧ್ಯಕ್ಷರಾಗಿ ಐಚಂಡ ಸದಾ ಆಯ್ಕೆಯಾಗಿದ್ದಾರೆ.

ಸಮಿತಿಯ ಕಾರ್ಯದರ್ಶಿಗಳಾಗಿ ಶಿನೋಜ್, ಪ್ರಿತೇಶ್ ರೈ, ಖಜಾಂಚಿಯಾಗಿ ನಿತೀನ್, ರಂಜನ್ ನಾಯ್ಡು, ಸಮಿತಿ ಸದಸ್ಯರುಗಳಾಗಿ ಪಂದಿಕಂಡ ಚಂಗಪ್ಪ, ಪಿ.ಎ.ಮಂಜುನಾಥ್, ವಸಂತ್, ಹರ್ಷಗೌಡ ಆಯ್ಕೆಯಾಗಿದ್ದಾರೆ.

ಸಮಿತಿಯ ಮಾಜಿ ಅಧ್ಯಕ್ಷ ಪಿ.ಎ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಮುದಾಯ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.