ಗೋಣಿಕೊಪ್ಪ ವರದಿ. ಸೆ. 10 : ವೀರಾಜಪೇಟೆ ತಾಲೂಕು ಶಿಕ್ಷಣ ಇಲಾಖೆ, ಶ್ರೀ ಶಾರದಾ ಪ್ರೌಡಶಾಲೆ ಸಹಯೋಗದಲ್ಲಿ ಬೆಕ್ಕೆಸೊಡ್ಲೂರು

ಶ್ರೀ ಶಾರದ ಪ್ರೌಡಶಾಲಾ ಮೈದಾನದಲ್ಲಿ ಮೂರು ದಿನ ನಡೆಯುವ ವೀರಾಜಪೇಟೆ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಡಶಾಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಧ್ವಜಾರೋಹಣ, ಪಥಸಂಚಲನ, ಧ್ವಜವಂದನೆ ಸ್ವೀಕಾರ, ಕ್ರೀಡಾಜ್ಯೋತಿ ಬೆಳಗುವದು, ಕ್ರೀಡಾಪಟುಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ ಮೂಲಕ ಉದ್ಘಾಟಿಸಲಾಯಿತು.

ಜಿ. ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜಿ. ಪಂ. ಸದಸ್ಯ ಬಾನಂಡ ಪ್ರಥ್ವಿ ಕ್ರೀಡಾಜ್ಯೋತಿ ಬೆಳಗಿದರು.

ತಾಲೂಕಿನ ಹೋಬಳಿಗಳ ಹೆಸರಿನಲ್ಲಿ ಗೌರವ ವಂದನೆ ನಡೆಯಿತು. ಅಮ್ಮತ್ತಿ, ವಿರಾಜಪೇಟೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಹಾಗೂ ಬಾಳೆಲೆ ಹೋಬಳಿ ಶಾಲೆಗಳ ಕ್ರೀಡಾಪಟುಗಳು ಪಥಸಂಚಲನ ನಡೆಸಿ ಧ್ವಜ ವಂದನೆ ಸಲ್ಲಿಸಿದರು. ಮೈದಾನದಲ್ಲಿ ಕ್ರೀಡಾ ಬ್ಯಾಂಡ್ ಮೂಲಕ ಅಪ್ಪಚಕವಿ ವಿದ್ಯಾಲಯದ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾರದ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

ತಾ. ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಕಾನೂರು ಗ್ರಾ. ಪಂ. ಅಧ್ಯಕ್ಷೆ ಲತಾಕುಮಾರಿ, ಉಪಾಧ್ಯಕ್ಷೆ ಗೀತಾ, ಮುಖ್ಯಶಿಕ್ಷಕ ಬಸವರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಪಿ. ಖ. ರತಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದÀ ಅಧ್ಯಕ್ಷ ಕೆ. ಆರ್. ಸುಬ್ಬಯ್ಯ, ಅನುದಾನಿತ ನೌಕರರ ಸಂಘದ ಅಧ್ಯಕ್ಷ ಪ್ರಭುಕುಮಾರ್, ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಉಪಸ್ಥಿತರಿದ್ದರು.

ತ್ಯಾಗರಾಜ್ ಪ್ರಾರ್ಥಿಸಿದರು. ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ನಿಧನರಾದವರಿಗೆ ಮೌನಾಚರಣೆ ಮಾಡಲಾಯಿತು.

ವರದಿ - ಸುದ್ದಿಪುತ್ರ

.