ಮಡಿಕೇರಿ, ಸೆ. 9: ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕೃತಿ ವಿಕೋಪ ಅಧ್ಯಯನ ತಂಡ ಮಡಿಕೇರಿ ನಗರದ ಮಳೆಹಾನಿ ಪ್ರದೇಶಗಳಾದ ಇಂದಿರಾ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಪುಟಾಣಿ ನಗರ, ಮುತ್ತಪ್ಪ ದೇವಾಲಯ ರಸ್ತೆ ಭಾಗಗಳಿಗೆ ತೆರಳಿ ಪರಿಶೀಲಿಸಿತು.

ಈ ಸಂದರ್ಭ ಸೂಕ್ತ ಸ್ಥಳಗಳಲ್ಲಿ ಜಿಲ್ಲಾಡಳಿತ ನಿರ್ಮಿಸುವ ಮನೆಗಳಿಗೆ ತೆರಳಲು ಸಿದ್ಧರಿರುವದಾಗಿ ತಿಳಿಸಿದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರದ ನಿವಾಸಿಗಳ ಹೆಸರನ್ನು ಪ್ರತ್ಯೇಕವಾಗಿ ದಾಖಲು ಮಾಡಿಕೊಳ್ಳಲಾಯಿತು.

ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಪ್ರಧಾನ ಕಾರ್ಯದರ್ಶಿ ತಾರಾ ಅಯ್ಯಮ್ಮ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಬೇಕಲ್ ರಮಾನಾಥ್, ಕಾರ್ಯದರ್ಶಿ ಬಷೀರ್ ಚೇರಂಬಾಣೆ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕಾಂಗ್ರೆಸ್ ಮಡಿಕೇರಿ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಅಧ್ಯಕ್ಷೆ ಜುಲೇಕಾಬಿ, ಸದಸ್ಯ ಚುಮ್ಮಿ ದೇವಯ್ಯ, ನಾಮ ನಿರ್ದೇಶಿತ ಸದಸ್ಯ ಗಿಲ್ಬರ್ಟ್, ನವನೀತ್, ತೆನ್ನಿರಾ ಮೈನಾ, ಯತೀಶ್, ಜಪ್ರುಲ್ಲ, ಆರ್.ಪಿ. ಚಂದ್ರಶೇಖರ್, ರಾಣಿ ಮತ್ತಿತರರು ಹಾಜರಿದ್ದರು.

ಇಂದು ಡಿಸಿಗೆ ಮನವಿ: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ತಾ. 10 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದೆಂದು ತಿಳಿಸಿರುವ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿರುವಂತೆ ಮನವಿ ಮಾಡಿದ್ದಾರೆ.