ಸೋಮವಾರಪೇಟೆ, ಸೆ. 8: ಮಹಾಮಳೆ, ಪ್ರವಾಹ, ಭೂ ಕುಸಿತದಿಂದ ತೀವ್ರ ಹಾನಿಗೀಡಾದ ಪ್ರದೇಶಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕಿನ ಸುಂಟಿಕೊಪ್ಪ-ಪಾಪ್ಲಿಕಾಡ್ ಎಸ್ಟೇಟ್ ಬಳಿ ಭಾರೀ ಪ್ರಮಾಣದ ಭೂಕುಸಿತ, ರಸ್ತೆ ಹಾನಿಗೊಂಡಿರುವ ಸ್ಥಳಗಳನ್ನು ವೀಕ್ಷಿಸಿದ ಮುಖ್ಯ ಕಾರ್ಯದರ್ಶಿಗಳು, ರಸ್ತೆ ಸಂಚಾರಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.ನಂತರ ಮಾದಾಪುರ, ಹಟ್ಟಿಹೊಳೆ, ಕಾಂಡನಕೊಲ್ಲಿ, ಹೊದಕಾನ, ಮುಕ್ಕೋಡ್ಲು ಭಾಗಗಳಲ್ಲಿ ಸಂಚರಿಸಿ, ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಮನೆ, ರಸ್ತೆ, ಕಾಫಿ ತೋಟ, ಬೆಟ್ಟಗಳನ್ನು ವೀಕ್ಷಿಸಿದರು. (ಮೊದಲ ಪುಟದಿಂದ) ಹಾಕತ್ತೂರು, ಮದೆನಾಡು, 2ನೇ ಮೊಣ್ಣಂಗೇರಿಗಳಿಗೂ ಭೇಟಿ ನೀಡಿ ಮಡಿಕೇರಿ ಜಿಲ್ಲಾ ಪಂಚಾಯಿತಿ ಭವನದ ಪರಿಹಾರ ಕೇಂದ್ರ ವೀಕ್ಷಿಸಿ ಅಹವಾಲು ಸ್ವೀಕರಿಸಿದರು.
ಅನೇಕ ಭಾಗಗಳಲ್ಲಿ ರಸ್ತೆಯ ಮೇಲೆ ಕುಸಿದಿರುವ ಬೆಟ್ಟ, ಮಣ್ಣು, ಮರಗಳನ್ನು ಹಿಟಾಚಿಯಂತ್ರದ ಮೂಲಕ ತಕ್ಷಣ ತೆರವುಗೊಳಿಸಬೇಕು. ಪಿಎಂಜಿಎಸ್‍ವೈ ಯೋಜನೆಯಡಿ ರಸ್ತೆಗಳ ದುರಸ್ತಿ, ಮರ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಕಾರ್ಯಪಾಲಕ ಅಭಿಯಂತರ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
(ಮೊದಲ ಪುಟದಿಂದ) ಹಾಕತ್ತೂರು, ಮದೆನಾಡು, 2ನೇ ಮೊಣ್ಣಂಗೇರಿಗಳಿಗೂ ಭೇಟಿ ನೀಡಿ ಮಡಿಕೇರಿ ಜಿಲ್ಲಾ ಪಂಚಾಯಿತಿ ಭವನದ ಪರಿಹಾರ ಕೇಂದ್ರ ವೀಕ್ಷಿಸಿ ಅಹವಾಲು ಸ್ವೀಕರಿಸಿದರು.
ಅನೇಕ ಭಾಗಗಳಲ್ಲಿ ರಸ್ತೆಯ ಮೇಲೆ ಕುಸಿದಿರುವ ಬೆಟ್ಟ, ಮಣ್ಣು, ಮರಗಳನ್ನು ಹಿಟಾಚಿಯಂತ್ರದ ಮೂಲಕ ತಕ್ಷಣ ತೆರವುಗೊಳಿಸಬೇಕು. ಪಿಎಂಜಿಎಸ್‍ವೈ ಯೋಜನೆಯಡಿ ರಸ್ತೆಗಳ ದುರಸ್ತಿ, ಮರ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಕಾರ್ಯಪಾಲಕ ಅಭಿಯಂತರ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಕ್ಷಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ, ಪುನರ್ವಸತಿ ವಿಭಾಗದ ಎಡಿಸಿ ಜಗದೀಶ್, ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಸೋಮವಾರ ಪೇಟೆ ತಾಲೂಕು ತಹಸೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕ ಶಿವಪ್ಪ, ಮಾದಾಪುರ ಪಿಡಿಓ ಪರಮೇಶ್, ಗ್ರಾಮ ಸಹಾಯಕ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.