ಚೆಟ್ಟಳ್ಳಿ, ಸೆ. 8: ಚೇರಳ ಶ್ರೀಮಂಗಲ ಗ್ರಾಮದ ಸಿದ್ದಿಕಲ್ ಎಸ್.ಕೆ., ಬೋಪಯ್ಯ, ದೇವಯ್ಯ, ದಿನೇಶ್ ಕುಮಾರ್ ಮತ್ತು ಎಸ್.ಕೆ. ದೇವರಾಜ್ ಇವರುಗಳ ಗದ್ದೆಗಳಿಗೆ 3 ಕಾಡಾನೆಗಳ ಹಿಂಡು ಧಾಳಿ ನಡೆಸಿ ಸುಮಾರು 1 ಲಕ್ಷದಷ್ಟು ನಷ್ಟಪಡಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪಕ್ಕದ ಕಾಫಿ ಬೋರ್ಡ್ ತೋಟದಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಮೀನುಕೊಲ್ಲಿ ಅರಣ್ಯಕ್ಕೆ ಅಟ್ಟುವ ಕಾರ್ಯ ಕೈಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳಾದ ಹನುಮಂತಪ್ಪ, ರಾಯಪ್ಪ, ವಿಜಯಕುಮಾರ್ ಮತ್ತು ಆರ್.ಆರ್.ಟಿ. ಸಿಬ್ಬಂದಿಗಳಾದ ಆಶಿಕ್ ಗೌಡ, ದುರ್ಗೇಶ್ ಪಂಜಿಮಲೆ, ಸುಬ್ರಮಣಿ ತಂಡದಲ್ಲಿದ್ದರು. ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.