ಗಣಪತಿ ಪೂಜೆ
ಮಡಿಕೇರಿ, ಸೆ. 8: ಶ್ರೀ ಗಣೇಶೋತ್ಸವದ ಪ್ರಯುಕ್ತ ಇರ್ಪು ಶ್ರೀ ರಾಮೇಶ್ವರ ದೇಗುಲದಲ್ಲಿ ತಾ. 13 ರಂದು ಬೆಳಿಗ್ಗೆ 10.15 ಕ್ಕೆ ಶ್ರೀ ಗಣೇಶ ಚತುರ್ಥಿ ಪೂಜೆ ನಡೆಯಲಿದೆ. 11.15 ಕ್ಕೆ ಮಹಾ ಗಣಪತಿ ಪೂಜೆ, 12.30 ಕ್ಕೆ ಮಹಾಪೂಜೆ, 12.45 ಕ್ಕೆ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.